

ಕುಣಿಗಲ್: ಮುತ್ತುಗಳಂತೆ ಮೌಲ್ಯವುಳ್ಳ ಸದಸ್ಯರನ್ನು ರೋಟರಿಗೆ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅವರಿಗೆ ಕ್ಲಬ್ನ ಮಹತ್ವ ತಿಳಿದಿರಬೇಕು. ಆಂತಹವರು ಸಾರ್ವಜನಿಕ ೇತ್ರದಲ್ಲಿ ಸೇವೆ ಸಲ್ಲಿಸಲು ಸಾಧ್ಯಎಂದು ರೋಟರಿಯ ಮೆಂಟರ್ ಮೆಂಬರ್ಷಿಪ್ ಡೆವಲಪ್ಮೆಂಟ್ ಪಿಡಿಜಿ ವಿ.ಶ್ರೀನಿವಾಸ್ಮೂರ್ತಿ ತಿಳಿಸಿದರು.
ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ರೋಟರಿ ಕ್ಲಬ್ ಆ್ ನರ್ತನ ಪುರಿ ವತಿಯಿಂದ ಹಮ್ಮಿಕೊಂಡಿದ್ದ ಜೋನ್ "ಎ್' ರ ನೂತನ ಸದಸ್ಯರ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ರೋಟರಿ ಕ್ಲಬ್ ಸದಸ್ಯರಾಗುವವರಿಗೆ ವ್ಯಕ್ತಿತ್ವ ವಿಕಾಸ, ಸುಸಂಸತ ಮತ್ತು ಸಾಮಾಜಿಕ ಸೇವೆಯನ್ನು ಕಲಿಸುತ್ತದೆ. ಸದಸ್ಯರಾಗುವವರು ಸಭೆಗೆ ಹಾಜರಾಗಿ ಕಾಫಿ ಕುಡಿದು, ಶುಲ್ಕ ಕಟ್ಟಿ ಹೋಗಹುವ ಕೆಲಸವಲ್ಲ. ಕ್ಲಬ್ನ ಮಹತ್ವ, ಉದ್ದೇಶ ಅರಿಯಬೇಕು. ಜನ ಸೇವೆಗೆ ಒತ್ತು ನೀಡಬೇಕು ಎಂದರು.
ಉತ್ತಮ ಸೇವೆ : 85 ವರ್ಷವಾಗಿದ್ದರೂ ಬಿ.ಎಂ.ಹುಚ್ಚೇಗೌಡ ಅವರು ರೋಟರಿ ಕ್ಲಬ್ ಆ್ ನರ್ತನಪುರಿ ಅಧ್ಯರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ.ಅವರ ಸಮಾಜ ಮುಖಿ ಕೆಲಸ ಗುರುತಿಸಿ ಡೆನಾಮಿಂಕ್ ಅಧ್ಯ ಎಂಬ ಬಿರುದು ನೀಡಿ ಸನ್ಮಾನಿಸಲಾಗುತ್ತಿದೆ ಎಂದರು.
ರೋಟರಿ ತರಬೇತುದಾರ ಡಿ.ಎಲ್.ವಿ.ಶರ್ಮ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ರೋಟರಿ ಕ್ಲಬ್ ಇದ್ದು, 3500 ಸದಸ್ಯರಿದ್ದಾರೆ. ಹೊಸದಾಗಿ 35 ಕ್ಲಬ್ ಹಾಗೂ ಒಂದೂವರೆ ಸಾವಿರ ಹೊಸ ಸದಸ್ಯರು ಸೇರಿದಂತೆ ಐದು ಸಾವಿರ ಸದಸ್ಯರನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು. ಮೆಂಬರ್ಶಿಪ್ ಡೆವಲಪಮೆಂಟ್ ಛೇರ್ಮನ್ ಬಿ.ಎಸ್.ವಿನೋದ್ಕುಮಾರ್, ರೋಟರಿ ಕ್ಲಬ್ ಆ್ ನರ್ತನಪುರಿ ಅಧ್ಯ ಎಂ.ಎಲ್.ಪ್ರಕಾಶ್,ಕಾನ್ಫರೆನ್ಸ್ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ಉಮೇಶ್, ನರ್ತನಪುರಿ ಕಾರ್ಯದರ್ಶಿ ಟಿ.ಸಿ.ಗಂಗಾಧರ್, ಸಂಸ್ಥಾಪಕ ರವಿಕುಮಾರ್, ಸದಸ್ಯರಾದ ಸಂತೋಷ್, ಕೋರ್ಟ್ ಗೋಪಾಲ್ ಇತರರು ಇದ್ದರು.