ಕೊಡವ ತರಬೇತಿಗೆ ಅವಕಾಶ: ಮಹೇಶ್ ನಾಚಯ್ಯ

MAHESH-NACHAIHA
Published on

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಮಕ್ಕಳಿಗೆ ಹಾಗೂ ಆಸಕ್ತ ಪುರುಷ-ಮಹಿಳೆಯರಿಗೆ ಕೊಡವ ಆಟ್-ಪಾಟ್ ಪಡಿಪು ಶಿಬಿರ ನಡೆಸಲು ನಿರ್ಧರಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರನ್ವಯ ಉಮ್ಮತಾಟ್, ಉರ್‌ಟಿಕೊಟ್ಟ್ ಆಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಚೌರಿಯಾಟ್ ಹಾಗೂ ಬಾಳೊಪಾಟ್, ದುಡಿಕೊಟ್ಟ್ ನಂತಹ ಕೊಡವ ಸಂಸ್ಕೃತಿಯ ಆಟ್-ಪಾಟ್ ತರಬೇತಿಯನ್ನು ಕನಿಷ್ಟ ೧೫ ದಿನಗಳವರೆಗೆ ಸಾಮೂಹಿಕವಾಗಿ ನೀಡಲಾಗುವುದು. ಅಂತೆಯೇ, ಕೊಡವರ ಕುಪ್ಯ-ಚೇಲೆ, ಮಂಡೆ ವಸ್ತ, ಕೊಡವತಿ ಪೊಡಿಯ ಉಡುವ ಕ್ರಮವನ್ನು ಕಲಿಸಲಾಗುವುದು. ಕೊಡವರ ಕೋರೆಕೆಟ್ಟ್, ಪಾನಿಕೆಟ್‌ಗಳ ತರಬೇತಿ ನೀಡಲಾಗುವುದು. ಇದರೊಂದಿಗೆ ದುಡಿ ಪೊಲ್‌ಪ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ತರಬೇತಿ ಬಯಸುವ ವಿದ್ಯಾಸಂಸ್ಥೆಗಳು, ಸಂಘ-ಸಂಸ್ಥೆಗಳ ಹೆಸರು, ವಿಳಾಸದೊಂದಿಗೆ ಅಕಾಡೆಮಿ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಮೊಬೈಲ್ ಸಂಖ್ಯೆ-೮೭೬೨೯೪೨೯೭೬ನ್ನು ಸಂಪರ್ಕಿಸಬಹುದು. ಆದ್ದರಿಂದ ಈ ಎಲ್ಲಾ ಕಲೆಗಳಲ್ಲಿ ಅರಿವು-ಅನುಭವ ಇರುವ ತಜ್ಞರು, ತರಬೇತುದಾರರು ತಮ್ಮ ಸ್ವ ವಿವರಗಳೊಂದಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾರ್‌ಗೆ ಕಳುಹಿಸಬಹುದು. ತರಬೇತುದಾರರಿಗೆ ಅಕಾಡೆಮಿ ವತಿಯಿಂದ ಸೂಕ್ತ ಸಂಭಾವನೆ ನೀಡಲಾಗುವುದು. ಅಂತೆಯೇ ತರಬೇತಿ ಪಡೆಯುವ ವೇಳೆ ಶಿಬಿರಾರ್ಥಿಗಳಿಗೆ ಲಘು ಫಲಹಾರವನ್ನು ಒದಗಿಸಲಾಗುವುದು ಎಂದು ಮಹೇಶ್ ನಾಚಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net