ಯಶಸ್ವಿ ಸಂಸ್ಥೆಯಿಂದ ಮಕ್ಕಳಿಗೆ ಅವಕಾಶ

successful
ಶನೀಶ್ವರ ದೇಗುಲದ ಮೂಲ ಮನೆತನದವರಾದ ಕೃಷ್ಣ ಕಾಂಚನ್ ಕೊಮೆ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
Published on

ಕೋಟ: ಸಾಂಸ್ಕೃತಿಕ ಲೋಕಕ್ಕೆ ಅನರ್ಘ್ಯ ಸಂಸ್ಥೆ ಕೊಡುಗೆ ಕೊಟ್ಟಿದೆ. ಮಕ್ಕಳ ಮೂಲಕ ಸಾಂಸ್ಕೃತಿಕವಾಗಿ ದೇಶಕ್ಕೇ ಹೊಸ ಭಾಷ್ಯ ಬರೆದ ಸಂಸ್ಥೆ ಯಶಸ್ವಿ ಕಲಾವೃಂದ. ಮಕ್ಕಳಿಗೆ ಅವಕಾಶ ನೀಡುತ್ತಾ ಬೆಳೆಸುವ ಸಂಸ್ಥೆಯನ್ನು ಸಮಾಜ ಪರಿಗಣಿಸಬೇಕು ಎಂದು ಕೃಷ್ಣ ಕಾಂಚನ್ ಕೊಮೆ ಹೇಳಿದರು.

ಶನೀಶ್ವರ ದೇಗುಲದ ಮೂಲ ಮನೆತನದವರಾದ ಕೃಷ್ಣ ಕಾಂಚನ್ ಕೊಮೆ ಅವರನ್ನು ಅಭಿನಂದಿಸಲಾಯಿತು. ಆಡಳಿತ ಮಂಡಳಿಯ ಉಮೇಶ್ ಮೆಂಡನ್ ಮತ್ತು ಮಂಜುನಾಥ ಕೊಮೆ, ದೇಗುಲದ ಅಧ್ಯಕ್ಷ ಗಣೇಶ್ ಅಮೀನ್, ರಾಹುಲ್ ಕುಂದರ್ ಕೋಡಿ ಉಪಸ್ಥಿತರಿದ್ದರು. ಲಂಬೋದರ ಹೆಗಡೆ ಗೌರವಾರ್ಪಣೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net