

ಹುಕ್ಕೇರಿ: ಸ್ಥಳೀಯ ವಿರಕ್ತಮಠದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಳಗಾವಿಯ ಮಕ್ಕಳ ಕಲ್ಯಾಣ ಸಂಸ್ಥೆ ಹಾಗೂ ಜೆಭಾರತ ಫೌಂಡೇಷನ್ ಆಶ್ರಯದಲ್ಲಿ ಒಂದು ತಿಂಗಳವರೆಗೆ ಜರುಗಿದ ಸ್ಪೋಕನ್ ಇಂಗ್ಲಿಷ್ ಮತ್ತು ವ್ಯಕ್ತಿತ್ವ ವಿಕಸನ ತರಬೇತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಸಾಮಗ್ರಿಗಳನ್ನು ವಿತರಿಸಲಾಯಿತು.
ಸಂಕೇಶ್ವರದ ಎಸ್.ಡಿ.ವಿ.ಎಸ್. ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕಿ ಡಾ. ವಿಜಯಮಾಲಾ ನಾಗನೂರಿ ಮಾತನಾಡಿ, ಇಂಗ್ಲಿಷ್ ಜಾಗತಿಕ ಭಾಷೆಯಾಗಿದ್ದು, ಅದನ್ನು ಕಲಿಯುವುದರಿಂದ ಅವಕಾಶಗಳು ಸಿಗುತ್ತವೆೆ. ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಇಂತಹ ಅವಕಾಶಗಳು ಬಂದಾಗ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶಿವಬಸವ ಶ್ರೀಗಳು ಮಾತನಾಡಿ, ಉತ್ತಮ ಕಾರ್ಯನಿರ್ವಹಣೆಗೆ ಇಂಗ್ಲಿಷ್ ಸಹಕಾರಿಯಾಗಲಿದೆ. ಅನೇಕ ವೆಜ್ಞಾನಿಕ ಪತ್ರಿಕೆ, ಮಾಹಿತಿ, ಇಂಟರ್ನೆಟ್‌ನಲ್ಲಿ ಲಭ್ಯವಾಗುವ ವಿಷಯಗಳು ಇಂಗ್ಲಿಷ್ ಕಲಿಕೆಯಿಂದ ಓದಲು ಸುಲಭವಾಗಲಿದೆ ಎಂದರು.
ತರಬೇತುದಾರ ಶಿವಾನಂದ ಝಿರ್ಲಿ, ಜಾನಪದ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಸುಭಾಷ ನಾಯಕ, ನಂದಕಿಶೋರ ಗೌಡರ, ಎ.ಬಿ. ಘೋಡಗೇರಿ, ಹುಂಡೇಕಾರ ಇದ್ದರು. ಪ್ರಾಚಾರ್ಯ ಕಿರಣ ಚೌಗಲಾ ಇತರರಿದ್ದರು.