

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಶ್ರೀ ಸತ್ಯಸಾಯಿ ಮಹಿಳಾ ಮಹಾವಿದ್ಯಾಲಯದ ಸಹಯೋಗದಲ್ಲಿ ಜು. 18ರಂದು ಮಧ್ಯಾಹ್ನ 2.30ಕ್ಕೆ ಶ್ರೀ ಸತ್ಯಸಾಯಿ ಮಹಿಳಾ ಕಾಲೇಜಿನ ಸಭಾಭವನದಲ್ಲಿ ಇಂದಿನ ಸ್ತ್ರೀ ಕುರಿತು ಅಭಿಪ್ರಾಯ ಮಂಡನೆ ಕಾರ್ಯಕ್ರಮ ಆಯೋಜಿಸಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕಾರ್ಯಕ್ರಮ ಉದ್ಘಾಟಿಸುವರು. ಸಾಯಿಶ್ರೀ ನಾಯಕ, ಶಿಲ್ಪಾ ನರಗುಂದ, ಮುಬಿನ್ ತಾಜ್ ಬಾಹುಮನಿ, ನಿಖಿತಾ ಪ್ಯಾಟಿಮನಿ, ಸಹನಾ ಚಿಕ್ಕಮ್ಯಾಗಲಗೇರಿ, ಸಂಜನಾ ಮೂಲಿಮನಿ, ಅತಾ ಹೂಲಿ, ಸಹನಾ ಪಲ್ಲೇದ, ಕಸ್ತೂರಿ ಮೊಕಾಶಿ, ಚಂದನಾ ವಿ., ಕಿರಣ ಮೆಣಸಗಿ, ಐಶ್ವರ್ಯ ಪಾಟೀಲ, ಸೀಮಾ ಪುಗಶೆಟ್ಟಿ, ವಿಜಯಶ್ರೀ ಬಿ., ಅರುಣಾ ಉಣಕಲ್, ವಿದ್ಯಾಥಿರ್ನಿಯರು ಅಭಿಪ್ರಾಯ ಮಂಡಿಸುವರು.
ಶ್ರೀ ಸತ್ಯಸಾಯಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಇಂಚಲ ಅಧ್ಯಕ್ಷತೆ ವಹಿಸುವರು. ನಿರ್ಣಾಯಕರಾಗಿ ಮಂಗಳಾ ಚಿಗಟೇರಿ, ಹಟ್ಟಿಹೊಳಿ ಆರ್.ಆರ್., ಸೌಮ್ಯ ಕೆಂಗಾನವರ ಆಗಮಿಸುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಮಹಿಳಾ ಮಂಟಪದ ಸಂಚಾಲಕಿ ಡಾ. ಶೈಲಜಾ ಅಮರಶೆಟ್ಟಿ ತಿಳಿಸಿದ್ದಾರೆ.