ಅನಧಿಕೃತ ಅಂಗಡಿ- ಮುಂಗಟ್ಟುಗಳ ತೆರವು ಕಾರ್ಯಾಚರಣೆ

bbgd 22-2
ರಾಮ ದಿಂಡವಾರ, ಗುರು ಗುಡಿಮನಿ ಇತರರಿದ್ದರು.
Published on

ಬಸವನಬಾಗೇವಾಡಿ: ಪಟ್ಟಣದಲ್ಲಿ ಪುರಸಭೆ ಮುಖ್ಯಾಧಿಕಾರಿ ರುದ್ರೇಶ ಚಿತ್ತರಗಿ ನೇತೃತ್ವದಲ್ಲಿ ಫುಟ್‌ಪಾತ್ ಮೇಲಿನ ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ಮಂಗಳವಾರ ಬೆಳಗ್ಗೆ ತೆರವುಗೊಳಿಸಲಾಯಿತು.

ಪಟ್ಟಣದ ಬಸವೇಶ್ವರ ವೃತ್ತ, ಬಸ್ ನಿಲ್ದಾಣದ ಮುಂಭಾಗ, ಮುದ್ದೇಬಿಹಾಳ ರಸ್ತೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಪಿಎಸ್‌ಐ ಗುರುಶಾಂತ ದಾಶ್ಯಾಳ ಬಂದೋಬಸ್ತ್ ಒದಗಿಸಿದ್ದರು. ಅಲ್ಲದೆ, ಪುಟ್‌ಪಾತ್ ಮೇಲಿನ ಅನಧಿಕೃತ ಗೂಡಂಗಡಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು.

ಮುಖ್ಯಾಧಿಕಾರಿ ರುದ್ರೇಶ ಚಿತ್ತರಗಿ ಮಾತನಾಡಿ, ಈ ಮೊದಲು ಎರಡ್ಮೂರು ಬಾರಿ ತೆರವು ಕಾರ್ಯಾಚರಣೆ ನಡೆಸಿದರೂ ಮತ್ತೆ ಕೆಲವರು ಪುಟ್‌ಪಾತ್ ಮೇಲೆ ಅನಧಿಕೃತ ಅಂಗಡಿಗಳನ್ನು ಹಾಕಿದ್ದರಿಂದ ರಸ್ತೆ ಇಕ್ಕಟ್ಟಾಗಿತ್ತು. ಮೆಗಾ ಮಾರುಕಟ್ಟೆ ಪಕ್ಕ ಅಂಗಡಿಗಳನ್ನು ಹಾಕಲು ತಿಳಿಸಲಾಗಿದೆ ಎಂದರು.

ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಮಹಾದೇವ ಜಂಬಗಿ, ವಿಜಯಕುಮಾರ ವಂದಾಲ, ರಾವುತ್ ಮ್ಯಾಗೇರಿ, ರಾಜು ರಾಠೋಡ, ಆನಂದ ಕಾರ್ಯಾಚರಣೆಯಲ್ಲಿದ್ದರು.

ಪ್ರತಿಭಟನೆ: ಪಟ್ಟಣದಲ್ಲಿ ನಡೆದ ತೆರವು ಕಾರ್ಯಚರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಇವಣಗಿ ರಸ್ತೆಯ ಟೀ- ಜೂನ್ ಎದುರು ಪ್ರತಿಭಟಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡರಾದ ಅಶೋಕ ಚಲವಾದಿ, ಪರಶುರಾಮ ದಿಂಡವಾರ, ಗುರು ಗುಡಿಮನಿ ಮಾತನಾಡಿ, ಪಟ್ಟಣದಲ್ಲಿ ಕೆಲ ಗಣ್ಯ ವರ್ತಕರು ಕಾನೂನು ಬಾಹೀರವಾಗಿ ಪುಟ್‌ಪಾತ್ ಮೇಲೆ ಅಂಗಡಿಗಳ ಸ್ಟೆಪ್ಸ್ ನಿರ್ಮಿಸಿಕೊಂಡಿದ್ದಾರೆ. ಅಂತವರನ್ನು ಬಿಟ್ಟು ಬಡ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ದೌರ್ಜನ್ಯ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮುಖ್ಯಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸದಿದ್ದರೆ ತಹಸೀಲ್ದಾರ್ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದೆಮದು ಎಚ್ಚರಿಸಿದರು.

ಮಹಾಂತೇಶ ಚಕ್ರವರ್ತಿ ಗಂಗಾಧರ ಆರೇರ, ಮಹೇಶ ಕೊಡಗಾನೂರ, ಯಮನೂರಿ ಚಲವಾದಿ, ಸಂತೋಷ ದಳಪತಿ, ಚಂದ್ರಶೇಖರ ನಾಲತವಾಡ, ಪ್ರಶಾಂತ ಬೂತನಾಳ, ಮುತ್ತು ಬಿದರಿ, ರವಿ ಮ್ಯಾಗೇರಿ, ಚಿದಾನಂದ ಪರನಾಕರ, ಸಂಜಯ ಬಿಸನಾಳ, ಲಕ್ಷ್ಮಣ ಹಾಲ್ಯಾಳ, ಸಂಗಪ್ಪ ಚಲವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net