ಆಪರೇಷನ್​ ಸಿಂಧೂರ ಸಂಭ್ರಮಾಚರಣೆ

24 05 2025_BGR RURAL_FLAP-PAGE_II NEW
ಆಪರೇಷನ್​ ಸಿಂಧೂರ ಯಶಸ್ಸಿನ ಸಂಭ್ರಮದ ಹಿನ್ನೆಲೆಯಲ್ಲಿ ನೆಲಮಂಗಲ ಪ್ರವಾಸಿ ಮಂದಿರ ಬಳಿ ತಿರಂಗಾ ಯಾತ್ರೆ ನಡೆಯಿತು. ಶ್ರೀ ಸಿದ್ದಲಿಂಗಸ್ವಾಮೀಜಿ, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ತಾಲೂಕು ಅಧ್ಯಕ್ಷ ಜಗದೀಶ್​ಚೌಧರಿ ಇದ್ದರು.
Published on

ನೆಲಮಂಗಲ : ಭಾರತದ ಮೇಲೆ ನಿರಂತರ ದಾಳಿ ನಡೆಸುತ್ತಾ ಬಂದಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಆಪರೇಷನ್​ ಸಿಂಧೂರ ಮೂಲಕ ತಕ್ಕ ಉತ್ತರ ನೀಡಿದೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ತಿಳಿಸಿದರು.

ನಗರದ ಪ್ರವಾಸಿ ಮಂದಿರ ಬಳಿ ಬಿಜೆಪಿ ಸೇರಿ ವಿವಿಧ ಸಂಟನೆಗಳ ಸಹಯೋಗದಲ್ಲಿ ಆಪರೇಷನ್​ ಸಿಂಧೂರ ಯಶಸ್ಸಿನ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ನಿವೃತ್ತ ಯೋಧರಿಗೆ ಸನ್ಮಾನ ಹಾಗೂ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಪಹಲ್ಗಾಮ್​ನಲ್ಲಿ ಉಗ್ರರ ದಾಳಿಗೆ 26 ಮಂದಿ ಮೃತಪಟ್ಟರೂ, ಭಾರತೀಯ ಸೇನೆ ಪಾಕಿಸ್ತಾನದ ನಾಗರಿಕರಿಗೆ ತೊಂದರೆ ನೀಡದೆ ಉಗ್ರರ ಅಡಗುತಾಣದ ಮೇಲೆ ಆಪರೇಷನ್​ ಸಿಂಧೂರ ಮೂಲಕ ಯುದ್ಧ ಮಾಡಿದೆ. ದೇಶದ ವಿಚಾರಕ್ಕೆ ಪ್ರತಿಯೊಬ್ಬರು ಪಾತೀತ ಮತ್ತು ಜಾತ್ಯತಿತವಾಗಿ ಒಗ್ಗೂಡಬೇಕಿದೆ. ತಿರಂಗಾ ಯಾತ್ರೆಗೆ ಅತಿಹೆಚ್ಚು ಮಹಿಳೆಯರು ಭಾಗವಹಿಸಿರುವುದು ಸಂತಸದ ಸಂಗತಿ. ದೇಶಕ್ಕೆ ಸೇವೆ ಸಲ್ಲಿಸಿದ ನಿವೃತ್ತ ಯೋಧರನ್ನು ಸನ್ಮಾನಿಸುವ ಮೂಲಕ ದೇಶ ಕಾಯುವ ಯೋಧರೊಂದಿಗೆ ಸ್ಪೂರ್ತಿ ತುಂಬಿರುವುದು ಉತ್ತಮ ಬೆಳವಣಿಗೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್​ಚೌಧರಿ ಮಾತನಾಡಿ, ಪಾಕಿಸ್ತಾನ ಉಗ್ರರನ್ನು ಉತ್ಪಾದನೆ ಮಾಡುವ ಕಾರ್ಖಾನೆಯಾಗಿದ್ದು, ನಿರಂತವಾಗಿ ಪೋಷಣೆ ಮಾಡಿಕೊಂಡು ಬರುತ್ತಿದೆ. ಭಯೋತ್ಪಾದಕರು ದೇಶದ ಅಮಾಯಕರ ಮೇಲೆ ದಾಳಿ ಮಾಡಿದ್ದಾರೆ. ಆಪರೇಷನ್​ ಸಿಂಧೂರ ಹೆಸರಿನಲ್ಲಿ ಪ್ರಧಾನಿ ದೇಶದ ಯೋಧರಿಗೆ ಪೂರ್ಣ ಸ್ವಾತಂತ್ರ$್ಯ ನೀಡಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸ ಮಾಡಿದ್ದಾರೆ. ಜತೆಗೆ ಯೋಧರ ಬಗ್ಗೆ ಕೆಲ ರಾಜಕೀಯ ವ್ಯಕ್ತಿಗಳು ಹಗುರವಾಗಿ ಮಾತನಾಡುತ್ತಿರುವುದು ಬೇಸರಸದ ಸಂಗತಿ. ಪ್ರತಿಯೊಬ್ಬರು ದೇಶಾಭಿಮಾನವನ್ನು ಚಿಕ್ಕಂದಿನಿಂದಲೇ ಮೈಗ್ಗೂಡಿಸಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಎಂ.ವಿ.ನಾಗರಾಜು, ಮುಖಂಡ ಸಪ್ತಗಿರಿಶಂಕರ್​ ನಾಯಕ್​, ಬಿಜೆಪಿ ಎಸ್​ಸಿ ಮೋರ್ಚಾ, ರಾಜ್ಯ ಉಪಾಧ್ಯಕ್ಷ ಮುನಿರಾಜು, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ಬೃಂಗೇಶ್​, ತಾಲೂಕು ಪ್ರಧಾನ ಕಾರ್ಯದರ್ಶಿ ರಂಗನಾಥ್​ಬಾಬು, ಮಹಿಳಾ ಮೋರ್ಚಾ ಅಧ್ಯಕ್ಷ ಮಂಜುಳಾ ಸುರೇಶ್​, ಎಸ್​ಟಿ ಮೋರ್ಚಾ ಅಧ್ಯಕ್ಷ ಕೆಂಪರಾಮಯ್ಯ, ಪುರಸಭೆ ಮಾಜಿ ಅಧ್ಯಕ್ಷ ರವಿ, ವೈದ್ಯಕಿಯ ಸಂದ ಅಧ್ಯಕ್ಷ ಡಾ.ಜಯಪ್ರಸಾದ್​, ರೋಟರಿ ಅಧ್ಯಕ್ಷ ಸುರೇಂದ್ರನಾಥ್​, ನಗರಸಭೆ ಹೆಚ್ಚುವರಿ ಸದಸ್ಯ ರಾಮಮೂರ್ತಿ, ಕೃಪಾನಂದ್​, ಜಿಪಂ ಮಾಜಿ ಸದಸ್ಯ ಎಂ.ಎನ್​.ರಾಮ್​, ಮುಖಂಡ ಲೋಕೇಶ್​, ಅಶ್ವತ್ಥ, ರವಿಕುಮಾರ್​, ನಾಗರಾಜು, ರಮೇಶ್​, ರಾಜಮ್ಮಪ್ರಕಾಶ್​, ಸೌಮ್ಯಾ, ಮಂಜುಳಾ ಇದ್ದರು.

ತಿರಂಗಾ ಯಾತ್ರೆ : ಆಪರೇಷನ್​ ಸಿಂಧೂರ ಯಶಸ್ಸಿನ ಸಂಭ್ರಮದ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ಮೂಲಕ ಡಾ.ಅಂಬೇಡರ್​ ವೃತ್ತದವರೆಗೆ ಮಂಗಳವಾರ ತಿರಂಗಾ ಯಾತ್ರೆ ನಡೆಯಿತು. ನಗರದೆಲ್ಲಡೆ ತ್ರಿವರ್ಣ ಧ್ವಜ ರಾರಾಜಿಸಿದವು. 1800 ಅಡಿಯ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ ಮಾಡಲಾಯಿತು. ಶ್ರೀ ಸಿದ್ದಲಿಂಗಸ್ವಾಮೀಜಿ, ಶ್ರೀ ರಮಾನಂದನಾಥ ಸ್ವಾಮೀಜಿ ಸೇರಿ ವಿವಿಧ ಸಂಟನೆಗಳ ಕಾರ್ಯಕರ್ತರು, ಶಾಲಾ&ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಹೆಜ್ಜೆ ಹಾಕಿದರು. ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ 20ಕ್ಕೂ ಹೆಚ್ಚು ತಾಲೂಕಿನ ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಮಾಯಕ ಪ್ರವಾಸಿಗರನ್ನು ಕೊಂದ ಉಗ್ರರಿಗೆ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ಈ ಮೂಲಕ ಮೋದಿಯವರು ಪ್ರಪಂಚಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ರಾಷ್ಟ್ರದ ರಕ್ಷಣೆಗೆ ನಿಂತ ಸೈನಿಕರಿಗೆ ತಿರಂಗಾಯಾತ್ರೆ ಮೂಲಕ ಅಭಿನಂದಿಸುತ್ತಿದ್ದೇವೆ. > ರಾಮಕೃಷ್ಣಪ್ಪ ಬಿಜೆಪಿ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net