ಆಪರೇಷನ್​ ಸಿಂಧೂರ ಸಂಭ್ರಮಾಚರಣೆ

21 05 2025_BNG_RURAL_PAGE_5
ಆಪರೇಷನ್​ ಸಿಂಧೂರ ಯಶಸ್ವಿ ಹಿನ್ನೆಲೆ ದೊಡ್ಡಬಳ್ಳಾಪುರದಲ್ಲಿ ತಿರಂಗ ಜಾಥಾ ನಡೆಯಿತು. ತಪಸೀಹಳ್ಳಿಯ ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ, ನಗರಸಭೆ ಅಧ್ಯೆ ಸುಮಿತ್ರಾ ಆನಂದ್​, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ನಗರಸಭಾ ಸದಸ್ಯ ಬಂತಿ ವೆಂಕಟೇಶ್​, ತಾಲೂಕು ಅಧ್ಯಕ್ಷ ನಾಗೇಶ್​, ನಗರ ಟಕದ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ ಟಿ.ವಿ.ಲ್ಮನಾರಾಯಣ್​, ವೆಂಕಟರಾಜು, ರಂಗನಾಥ್​ ಇದ್ದರು.
Published on

ದೊಡ್ಡಬಳ್ಳಾಪುರ : ಭಾರತೀಯ ಸೇನಾಪಡೆಗಳು ಭಯೋತ್ಪಾದಕರ ವಿರುದ್ಧ ನಡೆಸಿದ ಆಪರೇಷನ್​ ಸಿಂಧೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಸೇನಾ ಪಡೆಗಳ ಪರಾಕ್ರಮ ಸ್ಮರಿಸಿ ಹಾಗೂ ಭಯೋತ್ಪಾದನೆ ಖಂಡಿಸಿ ರಾಷ್ಟ್ರೀಯ ಭದ್ರತೆಗಾಗಿ ನಗರದಲ್ಲಿ ಸೋಮವಾರ ತಿರಂಗಾ ಜಾಥಾ ನಡೆಸಿದರು.

ನಗರದ ಬಯಲು ಬಸವಣ್ಣ ದೇವಾಲಯದ ತಾಲೂಕು ಕಚೇರಿವರೆಗೆ ನಡೆದ ತಿರಂಗ ಜಾಥಾದಲ್ಲಿ ಗಣ್ಯರು, ನಾಗರಿಕರು, ವಿದ್ಯಾರ್ಥಿಗಳು ರಾಷ್ಟ್ರ ಧ್ವಜ ಹಾಗೂ 500 ಅಡಿ ಉದ್ದದ ತ್ರಿವರ್ಣ ಧ್ವಜದೊಂದಿಗೆ ಮೆರವಣಿಗೆ ನಡೆಸಿದರು. ಜಾಥಾದಲ್ಲಿ ದೇಶಭಕ್ತಿ ಸಾರುವ ಹಾಗೂ ಉಗ್ರವಾದ ಖಂಡಿಸುವ ೂಷಣೆ ಕೂಗಲಾಯಿತು.

ತಿರಂಗಾ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಧೀರಜ್​ ಮುನಿರಾಜು, ದೇಶ ಕಾಯುತ್ತಿರುವ ಸೈನಿಕರಿಗೆ ನಾವು ಸದಾ ಋಣಿಗಳಾಗಿರಬೇಕು. ದೇಶದ ಹೆಣ್ಣುಮಕ್ಕಳ ಸಿಂಧೂರ ಅಳಿಸಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಹಾಗೂ ಸಂಸತಿ ಪ್ರತಿಕ ಸಿಂಧೂರ ಉಳಿಸಲು ನಡೆಸುತ್ತಿರುವ ಆಪರೇಷನ್​ ಸಿಂಧೂರ ಯಶಸ್ವಿಯಾಗಿದೆ. ಭಾರತ ಸೇನೆ ಭಯೋತ್ಪಾದನೆಯನ್ನು ಸೋಲಿಸಲಿದೆ. ಪಾಕಿಸ್ತಾನದ ಉಗ್ರವಾದ ಹೇಕ್ಕಿ ದೇಶದ ಜನರಿಗೆ ಭದ್ರತೆ ನೀಡುವಲ್ಲಿ ಮೋದಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸೇನಾಧಿಕಾರಿ ಕರ್ನಲ್​ ರಾಮದಾಸ್​ ಮಾತನಾಡಿ, ದೇಶದ ಭವಿಷ್ಯ ಪ್ರಜೆಗಳ ಕೈಲಿದ್ದು, ದೇಶ ಉಳಿಸುತ್ತೇವೆ ಎನ್ನುವ ಶಪಥ ಕೈಗೊಳ್ಳಬೇಕಿದೆ. ಮೋದಿ ಸರ್ಕಾರ ಚಾಣಕ್ಯರ 6 ನೀತಿ ಪಾಲಿಸುತ್ತಿದ್ದು, ದೇಶ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ. ರಕ್ಷಣಾ ೇತ್ರದಲ್ಲಿ ಜಗತ್ತಿನಲ್ಲಿಯೇ 3ನೇ ಸ್ಥಾನದಲ್ಲಿರುವ ಭಾರತ ಯಾರೇ ಆಕ್ರಮಣ ಮಾಡಿದರೂ ನುಗ್ಗಿ ಹೊಡೆಯುವ ಶಕ್ತಿ ಹೊಂದಿದೆ. ಉಗ್ರವಾದ, ಭಯೋತ್ಪಾದನೆ ಜಗತ್ತಿಗೆ ಮಾರಕವಾಗಿದ್ದು, ಇವು ಅಳಿಯಬೇಕು ಎಂದರು. ಇದೇ ವೇಳೆ ಸೇನಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net