ಸೈನಿಕ ಶ್ರೇಯಸ್ಸಿಗಾಗಿ ವಿಜಯ್ ಸಿದ್ಧಿ ಪೂಜೆ

knk-1
ಕನಕಗಿರಿಯ ಶ್ರೀ ಕನಕಾಚಲ ದೇವಸ್ಥಾನದಲ್ಲಿ ಬಿಜೆಪಿ ಮಂಡಲ ಹಾಗೂ ಹಿಂದುಪರ ಕಾರ್ಯಕರ್ತರಿಂದ ಶುಕ್ರವಾರ ವಿಜಯ್ ಸಿದ್ಧಿ ಪೂಜೆ ಸಲ್ಲಿಸಲಾಯಿತು. ಪಪಂ ಸದಸ್ಯರಾದ ಸುರೇಶ ಗುಗ್ಗಳಶೆಟ್ಟಿ, ಹನುಮಂತ ಬಸರಿಗಿಡದ, ಶೇಷಪ್ಪ ಪೂಜಾರ್, ಮುಖಂಡ ರವೀಂದ್ರ ಸಜ್ಜನ ಇತರರಿದ್ದರು.
Published on

ಕನಕಗಿರಿ: ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನ ಹಾಗೂ ಉಗ್ರರಿಗೆ ಪಾಠ ಕಲಿಸುತ್ತಿರುವ ಭಾರತೀಯ ಸೈನಿಕರಿಗೆ ಶಕ್ತಿ ತುಂಬಲು ಶುಕ್ರವಾರ ಇಲ್ಲಿನ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಬಿಜೆಪಿ ಹಾಗೂ ಹಿಂದುಪರ ಕಾರ್ಯಕರ್ತರು ವಿಜಯ್ ಸಿದ್ಧಿ ಪೂಜೆ ಸಲ್ಲಿಸಿದರು.

ಭಾರತೀಯ ಸೈನಿಕರಿಗೆ ಯಾವುದೇ ಆಪತ್ತು ಬರದಿರಲಿ. ಪಾಕಿಸ್ತಾನ ಈಗಲಾದರೂ ಭಾರತ ಮತ್ತು ಭಾರತಿಯ ಸೈನಿಕರ ಶಕ್ತಿ ಅರಿತುಕೊಳ್ಳಲಿ ಎಂದು ದೇವರಲ್ಲಿ ಬೇಡಿಕೊಂಡರು.

ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ನಿಕಟಪೂರ್ವ ಅಧ್ಯಕ್ಷ ಮಹಾಂತೇಶ್ ಸಜ್ಜನ್, ಕಾರ್ಯದರ್ಶಿಗಳಾದ ಗ್ಯಾನಪ್ಪ ಗಾಣದಾಳ, ಪ್ರಕಾಶ ಹಾದಿಮನಿ, ಮಂಡಲ ಉಪಾಧ್ಯಕ್ಷ ರಂಗಪ್ಪ ಕೊರಗಟಗಿ, ಪಪಂ ಸದಸ್ಯರಾದ ಸುರೇಶ ಗುಗ್ಗಳಶೆಟ್ಟಿ, ಹನುಮಂತ ಬಸರಿಗಿಡದ, ಶೇಷಪ್ಪ ಪೂಜಾರ್, ಮುಖಂಡರಾದ ರವೀಂದ್ರ ಸಜ್ಜನ, ಹನುಮೇಶ್ ಯಲಬುರ್ಗಿ, ಶರಣಪ್ಪ ಭಾವಿಕಟ್ಟಿ, ಕೀರ್ತಿಕುಮಾರ್ ಸೋನಿ, ನಾಗರಾಜ ತಗ್ಗಿಹಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net