ಆಪರೇಷನ್ ಸಿಂಧೂರಗೆ ಗೆಲುವಾಗಲಿ

10CHIKODI GRAMEEN1
Published on

ಚಿಕ್ಕೋಡಿ ಗ್ರಾಮೀಣ: ‘ಆಪರೇಷನ್ ಸಿಂಧೂರ’ಗೆ ಗೆಲುವಾಗಲಿ ಹಾಗೂ ಭಾರತೀಯ ಯೋಧರಿಗೆ ಭಗವಂತ ಹೆಚ್ಚು ಶಕ್ತಿ ಕರುಣಿಸಲಿ ಎಂಬ ಉದ್ದೇಶದಿಂದ ಮನೆದೇವರಾದ ಶ್ರೀ ಜ್ಯೋತಿರ್ಲಿಂಗ ದೇವರಿಗೆ ರುದ್ರಾಭೀಷೇಕ, ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಗ್ರುಪ್ ಸಂಸ್ಥೆಯ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆ ಆವರಣದಲ್ಲಿರುವ ಶ್ರೀ ಜ್ಯೋತಿರ್ಲಿಂಗ ಮಂದಿರದಲ್ಲಿ ಶುಕ್ರವಾರ ರುದ್ರಾಭೀಷೇಕ, ಮಹಾಪೂಜೆ ಕಾರ್ಯಕ್ರಮ ನೇರವೇರಿಸಿ ಮಾತನಾಡಿದರು.

ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಯುದ್ಧದಲ್ಲಿ ಗಡಿಕಾಯುವ ಯೋಧರಿಗೆ ಗೆಲವು ಸಿಗಲಿ ಹಾಗೂ ನಮ್ಮ ದೇಶ ಪ್ರಪಂಚದ ಉನ್ನತ ಸ್ಥಾನದಲ್ಲಿದೆ ಎಂದು ತೋರಿಸಿದ ನಮ್ಮ ಯೋಧರಿಗೆ ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.

ನಿಪ್ಪಾಣಿ, ಯಕ್ಸಂಬಾ ಅರ್ಚಕರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬೀರೇಶ್ವರ ಸಹಕಾರಿ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಯುವಧುರೀಣ ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಜಯಾನಂದ ಜಾಧವ, ಲಕ್ಷ್ಮೀಬಾಯಿ ಮೇತ್ರೆ, ಮಂಗಲ ಜೊಲ್ಲೆ ಸೇರಿ ಶ್ರೀ ಬೀರೇಶ್ವರ ಸಹಕಾರಿ, ಶ್ರೀ ಜ್ಯೋತಿ ಸಹಕಾರಿ, ಶಿವಶಂಕರ ಜೊಲ್ಲೆ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net