ಮಹಿಳೆಯ ಗರ್ಭಕೋಶದಲ್ಲಿದ್ದ 2ಕೆ.ಜಿ. 400 ಗ್ರಾಂ ಗಡ್ಡೆ  ಶಸ್ತ್ರಚಿಕಿತ್ಸೆ

09HDK00006
Published on

ಎಚ್.ಡಿ. ಕೋಟೆ : ಮಹಿಳೆಯ ಗರ್ಭಕೋಶದಲ್ಲಿದ್ದ 2 ಕೆ.ಜಿ 400 ಗ್ರಾಂ ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಇಲ್ಲಿನ ವೈದ್ಯರು ಯಶಸ್ವಿಯಾಗಿದ್ದಾರೆ. ತಾಲೂಕಿನ ಹೊಮ್ಮರಗಳ್ಳಿ ಗ್ರಾಮದ ನಿವಾಸಿ ಗೀತಾ ಎಂಬುವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಪಟ್ಟಣದ ಮಿನಿ ವಿಧಾನಸೌಧ ಎದುರಿಗಿರುವ ಕಬಿನಿ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಮಹಿಳೆಯನ್ನು ಪರೀಕ್ಷಿಸಿದಾಗ ಗಡ್ಡೆ ಇರುವುದು ಪತ್ತೆಯಾಯಿತು. ತಜ್ಞ ವೈದ್ಯರಾದ ಡಾ.ಶರತ್ ಕುಮಾರ್, ಡಾ. ಯಶವಂತ್ ಅವರು ಬುಧವಾರ ಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಮಹಿಳೆ ಹೊಟ್ಟೆ ಯಿಂದ 2 ಕೆ.ಜಿ 400 ಗ್ರಾಂ. ತೂಕದ ಗಡ್ಡೆಯನ್ನು ಹೊರ ತೆಗೆದಿದ್ದಾರೆ. ಈ ಸಂದರ್ಭ ಪ್ರತಿಕ್ರಿಯಿಸಿದ ಡಾ.ಯಶವಂತ್, ಆರ್ಥಿಕ ಸಮಸ್ಯೆ ಇರುವ ಕಾರಣ ಮಹಿಳೆ ಚಿಕಿತ್ಸೆ ಪಡೆಯಲಾರದೆ ಹಲವು ಸಮಯದಿಂದ ನರಳುತ್ತಿದ್ದರು. ಅವರೊಂದಿಗೆ ಚರ್ಚಿಸಿ, ಅತಿ ಕಡಿಮೆ ಖರ್ಚಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ, ಈಗ ಅವರು ಆರೋಗ್ಯದಿಂದ ಇದ್ದಾರೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net