

ಹುಬ್ಬಳ್ಳಿ : ರೈಲ್ವೆ ಕಾರ್ವಿುಕರು ರೈಲು ಹಳಿಗಳ ಮೇಲೆ ಕಾರ್ಯನಿರ್ವಹಿಸುವ ಸಮಯದಲ್ಲಿ ಅತ್ಯಂತ ಸುರಕ್ಷಿತ ಮತ್ತು ಜಾಗೃತಿಯಿಂದ ಕೆಲಸ ಮಾಡಬೇಕು ಎಂದು ರೈಲ್ವೆ ಕರ್ಮಚಾರಿ ಟ್ರಾ್ಯಕ್ವೆುಂಟೇನಿಯರ್ ಅಸೋಸಿಯೇಶನ್ನ ರಾಷ್ಟ್ರೀಯ ಉಪಾಧ್ಯಕ್ಷ ಎನ್. ಪ್ರಭುಕುಮಾರ ಹೇಳಿದರು.
ರೈಲ್ವೆ ಕಾರ್ಮಚಾರಿ ಟ್ರಾ್ಯಕ್ ಮೆಂಟೇನಿಯರ್ ಅಸೋಸಿಯೇಶನ್(ಆರ್.ಕೆ.ಟಿ.ಎ) ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಸುರಕ್ಷತಾ ಕಾರ್ಯುಗಾರದಲ್ಲಿ ಅವರು ಮಾತನಾಡಿದರು.
ಹಳಿಗಳ ದುರಸ್ತಿಯ ಕಾಮಗಾರಿ ಸಮಯದಲ್ಲಿ ಕೆಲವೊಂದು ಒತ್ತಡವಿದ್ದು, ಎಲ್ಲರೂ ಸಹನೆ ಮತ್ತು ಸಹಕಾರದಿಂದ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಇಂಜಿನಿಯರಿಂಗ್ ವಿಭಾಗದವರು ಹೆಮ್ಮೆ ಪಡುವಂತವರಾಗಬೇಕು ಎಂದರು.
ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಮಹೇಶ ಎಸ್. ಮಾತನಾಡಿ, ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಟ್ರಾ್ಯಕ್ ಮೆಂಟೇನಿಯರ್ ಕಾರ್ವಿುಕರು ಹೆಚ್ಚು ಭಾರವಾದ ಹಾಗೂ ರಿಸ್ಕ್ ಕೆಲಸ ಮಾಡುತ್ತಿದ್ದು, ಇವರೆಲ್ಲರ ಸುರಕ್ಷಿತೆಗಾಗಿ ಅಧಿಕಾರಿಗಳು ಹೊಸ ತಂತ್ರಜ್ಞಾನ ಆಧಾರಿತ ಸುರಕ್ಷಿತ ಕ್ರಮದ ಪರಿಕರಗಳನ್ನು ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಅಸೋಸಿಯೇಷನ್ ವಲಯದ ಅಧ್ಯಕ್ಷ ದಯಾನಂದ ಜಿ. ಮಾತನಾಡಿ, ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಟ್ರಾ್ಯಕ್ ಮೆಂಟೇನಿಯರ್ಗಳು ಪ್ರತಿ ವರ್ಷ ಸುಮಾರು 2 ರಿಂದ 3 ನೂರು ಕಾರ್ವಿುಕರು ಹಳಿಗಳ ಮೇಲೆ ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಹಳೆಯ ಸುರಕ್ಷತಾ ಕ್ರಮಗಳು. ಹೀಗಾಗಿ, ಅಧಿಕಾರಿಗಳು ಹೊಸ ತಂತ್ರಜ್ಞಾನ ಆಧಾರಿತ ಪರಿಕರಗಳನ್ನು ಆವಿಷ್ಕಾರ ಮಾಡುವ ಮೂಲಕ ಕಾರ್ವಿುಕರ ಹಿತ ಕಾಯಬೇಕು ಎಂದು ಮನವಿ ಮಾಡಿದರು.
ಅಸೋಸಿಯೇಷನ್ ಪದಾಧಿಕಾರಿಗಳಾದ ಪ್ರಕಾಶ ಜಾಧವ, ವೆಂಕಟೇಶ ಬಿ.ವಿ, ದೇವರಾಜ ನಾಯ್ಕ, ಪಕ್ಕಿರಪ್ಪ ಹರಿಜನ, ಶ್ರೀರಾಮ, ಧನ್ಯಕುಮಾರ ಯು., ಸಂದೀಪ ಎಲ್., ಬಸಪ್ಪ ಹಡಪದ, ದಾಮೋದರ ನಾಯ್ಕ, ಮಾರುತಿ ಹಾಗೂ ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗಗಳ ದಾವಣಗೆರೆ, ರಾಣೆಬೆನ್ನೂರು, ಚಿತ್ರದುರ್ಗ, ಮೊಳಕಾಲ್ಮೂರಿ, ಬಳ್ಳಾರಿ, ಗದಗ, ಧಾರವಾಡ, ಬೆಳಗಾವಿ, ವಾಸೊ್ಕೕ , ಲೋಂಡಾ, ಕುಡಚಿ, ಬಾಗಲಕೋಟೆ, ಹೊಸಪೇಟೆ, ಯಲವಿಗಿ, ಅರಸಿಕೇರಿ ಹಾಗೂ ಇನ್ನಿತರ ಸೆಕ್ಷನ್ ಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.