ಉತ್ಪಾದಕರು ಎದುರಿಸುತ್ತಿರುವ ಸವಾಲಿಗೆ ಕ್ರಿಯಾತ್ಮಕ ಪರಿಹಾರ

VEGUM
Published on

ಹುಬ್ಬಳ್ಳಿ: ಇಂಡಸ್ಟ್ರೀಯಲ್ ಸೆನ್ಸರ್‌ಗಳು, ಡಿಜಿಟಲ್ ಕಾರ್ಯಾಚರಣೆ, ಮ್ಯಾನುಫ್ಯಾಕ್ಚರಿಂಗ್ ಇಂಟಲಿಜೆನ್ಸ್ ಮತ್ತು ರೊಬೊಟಿಕ್ಸ್ ಪರಿಹಾರಗಳ ಪ್ರಮುಖ ಪೂರೈಕೆದಾರ ಸಂಸ್ಥೆ ವೇಗಮ್.ಐಒ ಸಲ್ಯುಷನ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಹೊಸ ಶಾಖೆಯನ್ನು ನಗರದಲ್ಲಿ ಆರಂಭಿಸುವ ಮೂಲಕ ಸೇವಾ ಚಟುವಟಿಕೆ ವಿಸ್ತರಣೆ ಮಾಡಿದೆ.

ಇಲ್ಲಿಯ ಕೆಎಲ್‌ಇ ಸಂಸ್ಥೆಯ ಸಿಟಿಐಇ ಸೆಂಟರ್‌ನಲ್ಲಿ ಆರಂಭಿಸಲಾದ ಹೊಸ ಶಾಖೆಯನ್ನು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ ಮತ್ತು ಧಾರವಾಡದ ಏಕಸ್ ಪ್ರೈವೇಟ್ ಲಿಮಿಟೆಡ್‌ನ ಸಿಟಿಒ ರವಿ ಗುತ್ತಲ್ ಅವರು ಉದ್ಘಾಟಿಸಿದರು.

ಉತ್ಪಾದಕರು ಎದುರಿಸುತ್ತಿರುವ ಸವಾಲು ತಿಳಿದುಕೊಂಡು ಅದಕ್ಕೆ ಕ್ರಿಯಾತ್ಮಕ ಪರಿಹಾರ ಸೂಚಿಸುವುದು. ಕೈಗಾರಿಕೆಗಳಲ್ಲಿ ಡಿಜಿಟಲ್ ಕ್ರಾಂತಿ ಮತ್ತು ಜಾಗತಿಕ ದಕ್ಷತೆಯನ್ನು ಹೆಚ್ಚಿಸುವ ಅತ್ಯಾಧುನಿಕ ತಾಂತ್ರಿಕ ಪರಿಹಾರಗಳನ್ನು ನೀಡಲಿರುವ ಈ ಸಂಸ್ಥೆಯ ಕಾರ್ಯವೈಖರಿಗೆ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಬ್ರಮಣ್ಯಂ ಕಾಶಿಭಟ್ಟ ಹಾಗೂ ಸವಿತಾ ಅವರಿಂದ 2017ರಲ್ಲಿ ಸ್ಥಾಪನೆಯಾದ ವೇಗಮ್.ಐಒ ಸಲ್ಯುಷನ್ಸ್ ಪ್ರೈವೇಟ್ ಲಿಮಿಟೆಡ್ ಇದೀಗ ಕೆಎಲ್‌ಇ ತಾಂತ್ರಿಕ ವಿವಿಯೊಂದಿಗೆ ಜಂಟಿಯಾಗಿ ಕಾರ್ಯ ನಿರ್ವಹಿಸಲು ಮುಂದೆ ಬಂದಿದೆ. ಕಳೆದ ಕೆಲ ವರ್ಷಗಳಿಂದ 54 ದೇಶಗಳ ನೂರಾರು ಕಂಪನಿಗಳಿಗೆ ಸೇವೆ ಒದಗಿಸುತ್ತಿದೆ ಎಂದರು.

ವೇಗಮ್ನ ನಾವೀನ್ಯತೆ ಮತ್ತು ಪ್ರಗತಿಯ ಪ್ರಯಾಣದಲ್ಲಿ ಇದು ಮಹತ್ವದ ಸಾಧನೆಯಾಗಿದೆ. ವೈವಿಧ್ಯಮಯ ಉದ್ಯಮಗಳ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು, ಡಿಜಿಟಲ್ ಭವಿಷ್ಯವನ್ನು ಹೆಚ್ಚಿಸಲು ಈ ಕಂಪನಿ ಸಹಾಯ ಮಾಡಲಿದೆ. ಹುಬ್ಬಳ್ಳಿ ಕಚೇರಿಯು ನಾವೀನ್ಯತೆ ಮತ್ತು ಸಹಯೋಗದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ವೇಗಮ್ ಸಂಸ್ಥೆಯ ಉಪಾಧ್ಯಕ್ಷ ಅನಂತ ಕೊಲ್ಹಾರ್ ತಿಳಿಸಿದ್ದಾರೆ.

ವೇಗಮ್ ನಿರ್ದೇಶಕ ಚೇತನ್ ಶೆಟ್ಟರ್ ಮಾತನಾಡಿ, ವೇಗಮ್ ವಿಶ್ವದಾದ್ಯಂತ ತಯಾರಕರಿಗೆ ವಿಶ್ವಾಸಾರ್ಹ ಪಾಲುದಾರರಾಗಲು ಬಯಸುತ್ತದೆ. ಡಿಜಿಟಲ್ ರೂಪಾಂತರದ ಯುಗವನ್ನು ಸ್ವೀಕರಿಸಲು ಸಂಸ್ಥೆಗಳಿಗೆ ಸಹಾಯ ಮಾಡಲಿದೆ. ಉತ್ಪಾದನಾ ವಲಯದಲ್ಲಿ ನಾವೀನ್ಯತೆ ಮತ್ತು ಸುಸ್ಥಿರತೆ ಹೆಚ್ಚಿಸಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net