

ಯಳಂದೂರು; ತಾಲೂಕಿನ ಅಗರ-ಮಾಂಬಳ್ಳಿ ಸೇರಿದಂತೆ 7 ಗ್ರಾಮಗಳು ಸೇರಿ 4 ದಿನ ಆಚರಿಸುವ ಹಿಂಡಿಮಾರಮ್ಮ ಜಾತ್ರೆ ಶುಕ್ರವಾರ ಮುಕ್ತಾಯವಾಯಿತು.
ದೀಪಾವಳಿ ಹಬ್ಬದಂದು ಆರಂಭಗೊಂಡಿದ್ದ ಹಿಂಡಿಮಾರಮ್ಮನ ದೇವರ ಹಬ್ಬ 4 ದಿನಗಳ ಕಾಲ ನಡೆಯಿತು. ಅಗರ-ಮಾಂಬಳ್ಳಿ, ಕಿನಕಹಳ್ಳಿ, ಕಟ್ನವಾಡಿ, ಬಸವಾಪುರ, ಬನ್ನಿಸಾರಿಗೆ, ಚಿಕ್ಕ ಉಪ್ಪಾರ ಬೀದಿ ಗ್ರಾಮಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿತು. ದೇವರ ಉತ್ಸವ ಮೂರ್ತಿಯನ್ನು ಅಗರ ಹಾಗೂ ಮಾಂಬಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ದೇಗುಲದ ಬಳಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ದೇವರಿಗೆ ಜೈಕಾರ ಹಾಕಿ ಮೂರು ಬಾರಿ ಪ್ರದಕ್ಷಿಣೆ ಹಾಕಿ ಉತ್ಸವ ಮೂರ್ತಿಯನ್ನು ದೇಗುಲದಲ್ಲಿ ಕೂರಿಸಲಾಯಿತು. ಈ ನಡುವೆ ಪಟಾಕಿ ಸಿಡಿಸಿ ಧಾರ್ಮಿಕ ವಿಧಿಗಳನ್ನು ಪೂರ್ಣಗೊಳಿಸಲಾಯಿತು.