ಸಂಜೆ ದಂತ ಚಿಕಿತ್ಸಾಲಯ ಪ್ರಾರಂಭ

IMG_20230802_171726.jpg
Published on

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯವು ಇದೇ ಆ.1ರಿಂದ ಸಂಜೆ ದಂತ ಚಿಕಿತ್ಸಾಲಯ ಪ್ರಾರಂಭಿಸಿದೆ. ಸೋಮವಾರದಿಂದ ಸಂಜೆ 4 ರಿಂದ 6 ಗಂಟೆ ಹಾಗೂ ಶನಿವಾರ ಸಂಜೆ 5.30ರಿಂದ ರಾತ್ರಿ 8 ಗಂಟೆವರೆಗೆ ಚಿಕಿತ್ಸಾಲಯವು ಸೇವೆ ನೀಡಲಿದೆ. ಸಾರ್ವಜನಿಕ ನೌಕರಿಯಲ್ಲಿ ಇವವರಿಗೆ ಅನುಕೂಲವಾಗುವ ದೃಷ್ಠಿಯಿಂದ ಚಿಕಿತ್ಸಾಲಯದ ಸಮಯವನ್ನು ಬದಲಾಯಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಮಾಹಿತಿಗೆ ದೂ.0831-2444114ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net