ಮರೋಳಿಯಲ್ಲಿ ನೆಕ್ಸಾ ಸರ್ವಿಸ್ ಸೆಂಟರ್ ಆರಂಭ

mng_1 jul NEXA
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮರೋಳಿಯ ವಿ.ಎಸ್. ಕುಡ್ವ ರಸ್ತೆಯಲ್ಲಿ ನೆಕ್ಸಾ ಸರ್ವಿಸ್ ಸೆಂಟರ್‌ನ್ನು ಸ್ಥಾಪಿಸಿದೆ.
Published on

ಮಂಗಳೂರು: ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮರೋಳಿಯ ವಿ.ಎಸ್. ಕುಡ್ವ ರಸ್ತೆಯಲ್ಲಿ ನೆಕ್ಸಾ ಸರ್ವಿಸ್ ಸೆಂಟರ್‌ನ್ನು ಸ್ಥಾಪಿಸಿದೆ. ನೆಕ್ಸಾ ಸರ್ವಿಸ್ ಸೆಂಟರ್ ಮಾರುತಿ ಸುಝುಕಿಯ ಪ್ರೀಮಿಯಂ ಕಾರುಗಳ ಸರ್ವಿಸ್‌ಗೆ ಸೀಮಿತವಾಗಿದ್ದು, ಇದು ಈಗಾಗಲೇ ಕಾರ್ಯಾಚರಣೆಯಲ್ಲಿದೆ.

ಮಾರುತಿ ಸುಝುಕಿಯ ಅಧಿಕೃತ ಡೀಲರ್ ಮತ್ತು ಸರ್ವಿಸ್ ಸೆಂಟರ್ ಆಗಿರುವ ಭಾರತ್ ಆಟೋ ಕಾರ್ಸ್‌ ಪ್ರೈವೆಟ್ ಲಿಮಿಟೆಡ್ ಮಂಗಳೂರಿನ ಕುಂಟಿಕಾನದಲ್ಲಿ ಸುಸಜ್ಜಿತ ಹಾಗೂ ವಿಶಾಲವಾದ ಶೋರೂಂ ಹಾಗೂ ಸರ್ವಿಸ್ ಸೆಂಟರ್ ಹೊಂದಿದ್ದು, ಗ್ರಾಹಕರಿಗೆ ಕಳೆದ 18ವರ್ಷಗಳಿಂದ ಅತ್ಯುನ್ನತ ಸೇವೆಯನ್ನು ಒದಗಿಸುತ್ತಾ ಬಂದಿದೆ. ಮಾತ್ರವಲ್ಲದೆ ಮಂಗಳೂರಿನ ಕದ್ರಿ ರಸ್ತೆಯಲ್ಲಿ ಮಾರುತಿ ಪ್ರೀಮಿಯಂ ಕಾರುಗಳ ಮಾರಾಟಕ್ಕೆ ವಿನೂತನ ’ನೆಕ್ಸಾ ಕದ್ರಿ ರೋಡ್’ ಎಂಬ ಮಳಿಗೆಯನ್ನು ಹೊಂದಿದೆ.

*18ವರ್ಷಗಳಿಂದ ಅತ್ಯುನ್ನತ ಸೇವೆ

2006ರ ಮೇ ತಿಂಗಳಲ್ಲಿ ಆರಂಭಗೊಂಡ ಪ್ರತಿಷ್ಠಿತ ಭಾರತ್ ಆಟೋ ಕಾರ್ಸ್‌ ಸಂಸ್ಥೆಯು ಕ್ರಮೇಣ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಮೂಡುಬಿದಿರೆ, ಉಜಿರೆ, ಮೂಲ್ಕಿ, ತೊಕ್ಕೊಟ್ಟು ಮತ್ತು ಬಜಪೆಯಲ್ಲಿ ವಿಸ್ತೃತ ಮಳಿಗೆಗಳನ್ನು ಸ್ಥಾಪಿಸಿದ್ದು, ಮಡಂತ್ಯಾರು ಹಾಗೂ ನೆಲ್ಯಾಡಿಗಳಲ್ಲಿ ಗ್ರಾಮೀಣ ವಿಸ್ತೃತ ಮಳಿಗೆಗಳನ್ನು ಸ್ಥಾಪಿಸಿ, ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ದಕ್ಷಿಣಕನ್ನಡ ಮಾತ್ರವಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾರುತಿ ಸುಝುಕಿ ಡೀಲರ್‌ಶಿಫ್ ಸ್ಥಾಪಿಸಿ, ಭಟ್ಕಳ, ಅಂಕೋಲ ಮತ್ತು ಕುಮಟಾದಲ್ಲಿ ವಿಸ್ತೃತ ಮಳಿಗೆ ಹಾಗೂ ಸಿದ್ಧಾಪುರದಲ್ಲಿ ಗ್ರಾಮೀಣ ವಿಸ್ತೃತ ಮಳಿಗೆಗಳನ್ನು ತೆರೆದು ಮಾರುತಿ ಸುಝುಕಿ ಕಾರುಗಳ ಮಾರಾಟ ಹಾಗೂ ಮಾರಾಟ ನಂತರದ ಸೇವೆಯಲ್ಲಿ ದ.ಕ. ಮತ್ತು ಉ.ಕ. ಜಿಲ್ಲೆಗಳಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ.

ಮಂಗಳೂರಿನ ಮರೋಳಿಯಲ್ಲಿ ತೆರೆದಿರುವ ನೆಕ್ಸಾ ಸರ್ವಿಸ್ ಸೆಂಟರ್ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಭಾರತ್ ಆಟೋ ಕಾರ್ಸ್‌ ನ ಆಡಳಿತ ನಿರ್ದೇಶಕ ಸುಧೀರ್ ಎಂ. ಪೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-------------------

ಕಾರುಗಳ ಸರ್ವಿಸ್ ಸೆಂಟರ್

ಭಾರತ್ ಆಟೋ ಕಾರ್ಸ್‌ ಮಂಗಳೂರಿನ ಕುದ್ರೋಳಿ ಮತ್ತು ಕದ್ರಿ ರಸ್ತೆಯಲ್ಲಿರುವ ಭಾರತ್ ಬೀಡಿ ವರ್ಕ್ಸ್ ಬಳಿ ವಿಶೇಷವಾಗಿ ಮಾರುತಿ ಸುಝುಕಿ ಕಾರುಗಳ ಸರ್ವಿಸ್ ಸೆಂಟರ್‌ಗಳನ್ನು ಹೊಂದಿದೆ. ಮಂಗಳೂರಿನ ಬಂದರಿನ ಅಜೀಝುದ್ಧೀನ್ ರಸ್ತೆಯಲ್ಲಿ ಮತ್ತು ಉ.ಕ. ಜಿಲ್ಲೆಯ ಕುಮಟಾದಲ್ಲಿ ಮಾರುತಿ ಸುಝುಕಿ ಯವರ ವಾಣಿಜ್ಯ ವಾಹನಗಳ ಮಾರಾಟಕ್ಕೆ ಮಳಿಗೆಗಳು ಕೂಡಾ ಲಭ್ಯವಿದೆ. ಅಲ್ಲದೆ ಮಂಗಳೂರಿನ ಪಿಂಟೋಸ್ ಲೇನ್ ಮತ್ತು ಪುತ್ತೂರಿನಲ್ಲಿ ಉಪಯೋಗಿಸಿದ ಕಾರುಗಳ ವಿನಿಮಯ ಮತ್ತು ಮಾರಾಟಕ್ಕೆ ಟ್ರೂವೇಲ್ಯೂ ಮಳಿಗೆ ಹಾಗೂ ಕದ್ರಿ ರಸ್ತೆಯಲ್ಲಿ ವಾಹನ ಚಾಲನಾ ತರಬೇತಿಗೆ ಮಾರುತಿ ಡ್ರೈವಿಂಗ್ ಸ್ಕೂಲ್ ಕೂಡಾ ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net