

ಗುರುಪುರ: ಮೂಲಸೌಕರ್ಯ ಭದ್ರಗೊಂಡರೆ ಭವಿಷ್ಯದಲ್ಲಿ ಎದುರಾಗಬಹುದಾದ ಆರೋಗ್ಯ ಸಮಸ್ಯೆ ನಿರ್ವಹಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ‘ನಮ್ಮ ಕ್ಲಿನಿಕ್’ ಸಹಿತ ರಾಜ್ಯಾದ್ಯಂತ 100 ನಮ್ಮ ಕ್ಲಿನಿಕ್ ತೆರೆದಿದೆ. ಈ ಕ್ಲಿನಿಕ್‌ಗಳಿಗೆ ಜನರ ಸ್ಪಂದನೆ ಗಮನಿಸಿ ಭವಿಷ್ಯದಲ್ಲಿ ಇನ್ನಷ್ಟು ಕಡೆಗಳಲ್ಲಿ ನಮ್ಮ ಕ್ಲಿನಿಕ್ ತೆರೆಯಲಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಪಚ್ಚನಾಡಿಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ, ಪರಿಸರದ ಜನರು ಇದರ ಪ್ರಯೋಜನ ಪಡೆದುಕೊಂಡು ಇತರರಿಗೆ ಮಾಹಿತಿ ನೀಡಬೇಕು ಎಂದರು.
ಕಾರ್ಪೊರೇಟರ್ ಸಂಗೀತಾ ಆರ್.ನಾಯಕ್ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಂತೆ ಕಾರ್ಯನಿರ್ವಹಿಸಲಿರುವ ‘ನಮ್ಮ ಕ್ಲಿನಿಕ್’ ಸ್ಥಾಪನೆ ಮೂಲಕ ಚುನಾವಣಾ ಸಂದರ್ಭ ಜನರ ಬೇಡಿಕೆಯಂತೆ ನೀಡಲಾಗಿದ್ದ ಆಶ್ವಾಸನೆ ಪೂರ್ಣಗೊಂಡಂತಾಗಿದೆ. ಕ್ಲಿನಿಕ್‌ನಲ್ಲಿ ಯಾವುದೇ ಲೋಪಗಳು ಸಂಭವಿಸಿದಲ್ಲಿ ಜನರು, ಕೂಗಾಡದೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲು ಸಹಕರಿಸಬೇಕು ಎಂದರು.
ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ, ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ಆರ್‌ಸಿಎಚ್ ಡಾ.ರಾಜೇಶ್ ಮಾತನಾಡಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಬಿಜೆಪಿ ಮುಖಂಡ ಸಂದೀಪ್ ಪಚ್ಚನಾಡಿ, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ.ರಾಜೇಶ್‌ಚಂದ್ರ, ಡಾ.ಅಭಿಷೇಕ್, ಡಾ.ಸುದರ್ಶನ್, ಡಾ.ಚಿರಾಗ್, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ವಿಲ್ಫ್ರೆಡ್ ಸಲ್ಡಾನ, ಲಿಂಗಪ್ಪ ಪೂಜಾರಿ, ಶಿವಾಜಿ, ಶಂಕರ್, ಕ್ಲಿನಿಕ್ ಸಿಬ್ಬಂದಿ, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಪ್ರಶಾಂತ್ ಪೈ ಕಾರ್ಯಕ್ರಮ ನಿರೂಪಿಸಿದರು.