ಅ. 9ರಂದು ಓಷಿಯನ್​ ಪರ್ಲ್​ ಟೈಮ್ಸ್​ ಸ್ಕ್ವೇರ್​ ಉದ್ಘಾಟನೆ

udp-pearl
Published on

ಉಡುಪಿ: ಉತ್ತರ ಹಾಗೂ ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿರುವ ಓಷಿಯನ್​ ಪರ್ಲ್​ ಹೋಟೆಲ್​ ಎರಡನೇ ಶಾಖೆ ದಿ ಓಷಿಯನ್​ ಪರ್ಲ್​ ಟೈಮ್ಸ್​ ಸ್ಕ್ವೇರ್​ ಉಡುಪಿ-ಮಣಿಪಾಲ ರಸ್ತೆಯ ಕಲ್ಸಂಕದಲ್ಲಿರುವ ಮಾಂಡವಿ ಟೈಮ್ಸ್​ ಸ್ಕ್ವೇರ್​ ಮಾಲ್​ನಲ್ಲಿ ಅ. 9ರಂದು 12 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಟೈಮ್ಸ್​ ಸ್ಕ್ವೇರ್​ ಮಾಲ್​ ಮಾಲೀಕ ಡಾ. ಜೆರ್ರಿ ವಿನ್ಸೆಂಟ್​ ಡಯಾಸ್​, ದೇಗುಲಗಳ ನಗರಿ ಎಂದೇ ಖ್ಯಾತಿ ಹೊಂದಿರುವ ಉಡುಪಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಈ ಹೋಟೆಲ್​ ನಲ್ಲಿ 3 ಹಾಲ್​ ಗಳಿದ್ದು, ಗ್ರ್ಯಾಂಡ್​ ದಿ ಪೆಸಿಫಿಕ್​ 1 ಹಾಲ್​ನಲ್ಲಿ ಸುಮಾರು 2,000 ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಬಹುದು. ಮದುವೆಗಳು, ದೊಡ್ಡ ದೊಡ್ಡ ಸಮ್ಮೇಳನ ನಡೆಸಲು ಅನುಕೂಲಕರವಾಗಿದೆ. ಪೆಸಿಫಿಕ್​&2 ಹಾಲ್​ ಮಧ್ಯಮ ಗಾತ್ರದ ಕಾರ್ಯಕ್ರಮಗಳಿಗೆ ಸೂಕ್ತವಾಗಿದ್ದು, ಸುಮಾರು 250 ಮಂದಿ ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ. ಪೆಸಿಫಿಕ್-3 ಹಾಲ್​ನಲ್ಲಿ 800 ಮಂದಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.

67 ಕೊಠಡಿ ಸೌಲಭ್ಯ
ಅತ್ಯುತ್ತಮ ದರ್ಜೆಯ ವಿನ್ಯಾಸ, ಒಳಾಂಗಣಗಳನ್ನು ಹೊಂದಿರುವ ಹೋಟೆಲ್​ನಲ್ಲಿ ಪ್ರೆಸಿಡೆಂಟಲ್​ ಸೂಟ್​, ಕ್ಲಬ್​ ಸೂಟ್ಸ್​, ಫ್ಯಾಮಿಲಿ ಸೂಟ್​ ಮತ್ತು ಡಿಲಕ್ಸ್​ ರೂಮ್​ಗಳು ಒಟ್ಟು 67 ಐಷಾರಾಮಿ ಕೊಠಡಿಗಳು ಲಭ್ಯವಿದೆ. ಜಿಮ್​, ಫಿಟ್ನೆಸ್​ ಸೆಂಟರ್​, ಬಿಜಿನೆಸ್​ ಲಾಂಜ್​ ಸೌಲಭ್ಯಗಳಿವೆ. ಈಜು ಪ್ರಿಯರ ಅನುಕೂಲಕ್ಕಾಗಿ ಅಂತರರಾಷ್ಟ್ರೀಯ ಗುಣಮಟ್ಟದ ಉತ್ತಮ ವಿನ್ಯಾಸದ ಈಜು ಕೊಳವನ್ನು ನಿಮಾರ್ಣ ಮಾಡಲಾಗಿದೆ ಎಂದರು.

ದಿ ಓಷಿಯನ್​ ಪರ್ಲ್​ ಸಂಸ್ಥೆ ಹಿರಿಯ ಉಪಾಧ್ಯಕ್ಷ ಬಿ.ಎನ್​. ಗಿರೀಶ್​ ಮಾತನಾಡಿ, ಆಧುನಿಕ ವಾಸ್ತು ಶೈಲಿಯನ್ನು ಒಳಗೊಂಡಿರುವ ನೂತನ ಹೋಟೆಲ್​ನಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ಆಹಾರ ಖಾದ್ಯ, ಕಾಂಟಿನೆಂಟಲ್​, ಚೈನಿಸ್​ ಆಹಾರ ಉತ್ಪನ್ನಗಳ 'ಕೋರಲ್​' ರೆಸ್ಟೋರೆಂಟ್​, ಜಾಸ್​ ಸ್ಪೋರ್ಟ್ಸ್​ ಬಾರ್​ ಮತ್ತು ಜಾಸ್​ ಎಕ್ಸಿಕ್ಯೂಟಿವ್​ ಲಾಂಜ್​ಗಳಿವೆ. ವಿವಿಧ ಬಗೆಯ ಪ್ರಾದೇಶಿಕ ಆಹಾರ ಉತ್ಪನ್ನಗಳು ಲಭ್ಯ ಇವೆ. ಸಾಗರ್​ರತ್ನ ಹೋಟೆಲ್​ 182 ಶಾಖೆಗಳನ್ನು ಹೊಂದಿದ್ದು, 11 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಓಶಿಯನ್​ ಪರ್ಲ್​ ಹೋಟೆಲ್​ ಮಂಗಳೂರು ಉಡುಪಿ, ಉಜಿರೆ, ಹುಬ್ಬಳ್ಳಿಯಲ್ಲಿ ಈಗಾಗಲೇ ಗ್ರಾಹಕರ ಮೆಚ್ಚುಗೆ ಗಳಿಸಿದೆ ಎಂದು ಹೇಳಿದರು.

ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಉಡುಪಿ ಬಿಷಪ್​ ಜೆರಾಲ್ಡ್​ ಐಸಾಕ್​ ಲೋಬೋ, ಸ್ಥಳಿಯ ಮಸೀದಿ ಧರ್ಮಗುರು ಉಪಸ್ಥಿತರಿರುವರು ಎಂದರು.
ಸಾಗರ ರತ್ನ ಮತ್ತು ಓಶಿಯನ್​ ಪರ್ಲ್​ ಸಮೂಹ ಸಂಸ್ಥೆಗಳ ಅಧ್ಯಕ್ಷ ಜಯರಾಮ್​ ಬನಾನ್​, ದಿ.ಟೈಮ್​ ಸ್ಕ್ವೇರ್​ ಮಾಲ್​ನ ಜೇಸನ್​ ಡಯಾಸ್​, ಗ್ಲೆನ್​ ಡಯಾಸ್​, ಜನರಲ್​ ಮ್ಯಾನೇಜರ್​ ಪ್ರಶಾಂತ್​ ಆಚಾರ್ಯ, ಓಶಿಯನ್​ ಪರ್ಲ್​ ಉಪಾಧ್ಯಕ್ಷ ಶಿವಕುಮಾರ್​ ಉಪಸ್ಥಿತರಿದ್ದರು.

ದಿ ಓಷಿಯನ್​ ಪರ್ಲ್​ ಬೀಚ್​ ರೆಸಾರ್ಟ್​ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಮಂಗಳೂರು-ಗೋವಾ ಮಧ್ಯೆ ಅತ್ಯುತ್ತಮ ರೆಸಾರ್ಟ್​ ಇದಾಗಲಿದೆ. ಚಿಕ್ಕಮಗಳೂರಿನಲ್ಲಿ 100 ಎಕ್ರೆ ಪ್ರದೇಶದಲ್ಲಿ ಎಸ್ಟೇಟ್​ ರೆಸಾರ್ಟ್​ ನಿರ್ಮಿಸಲಾಗಿದ್ದು, ಮುಂದಿನ ವರ್ಷ ಲೋಕಾರ್ಪಣೆಗೊಳ್ಳಲಿದೆ.ರೋಶನ್​ ಬನಾನ್​, ಆಡಳಿತ ನಿರ್ದೇಶಕರು, ದಿ ಓಷಿಯನ್​ ಪರ್ಲ್​ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net