

ಮಂಡ್ಯ: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2023-24ನೇ ಜನವರಿ ಆವೃತ್ತಿಯ ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭವಾಗಿದೆ.
ಸ್ನಾತಕ/ಸ್ನಾತಕೋತ್ತರ ಕೋರ್ಸ್‌ಗಳಾದ ಬಿ.ಎ/ಬಿ.ಕಾಂ, ಬಿ.ಸಿ.ಎ/ಬಿ.ಬಿ.ಎ, ಬಿ.ಎಸ್ಸಿ, ಬಿ.ಎಲ್.ಐ,ಎಸ್ಸಿ., ಬಿ.ಎಸ್.ಡಬ್ಲುೃ, ಎಂ.ಎ/ಎಂ.ಕಾಂ, ಎಂ.ಎಲ್.ಐ.ಎಸ್ಸಿ, ಎಂ.ಬಿ.ಎ, ಎಂ.ಎಸ್ಸಿ, ಎಂ.ಎಸ್.ಡಬ್ಲುೃ, ಎಂ.ಸಿ.ಎ, ಡಿಪ್ಲೊಮಾ, ಪಿ.ಜಿ ಡಿಪ್ಲೊಮಾ, ಸರ್ಟಿಫಿಕೇಟ್ ಪ್ರೋಗ್ರಾಂಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ.
ಆಸಕ್ತರು ವಿವಿಯ ಅಧಿಕೃತ ವೆಬ್‌ಸೈಟ್ www.ksoumysore.ac.in ನಲ್ಲಿ ಪ್ರವೇಶಾತಿ ಶುಲ್ಕ, ವಿದ್ಯಾರ್ಹತೆ ಹಾಗೂ ವಿವರಣಾ ಪುಸ್ತಕ ಮತ್ತು ಆನ್‌ಲೈನ್‌ನಲ್ಲಿ ಪ್ರವೇಶಾತಿ ಅರ್ಜಿ ಸಲ್ಲಿಸಬಹುದು. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳು ಮತ್ತು ಮಾಜಿ ಸೈನಿಕರಿಗೆ ಬೋಧನಾ ಶುಲ್ಕದಲ್ಲಿ ಶೇ.15ರಷ್ಟು ವಿನಾಯಿತಿ ನೀಡಲಾಗುವುದು. ಆಟೋ/ಕ್ಯಾಬ್ ಚಾಲಕರು, ಕೆಎಸ್‌ಆರ್‌ಟಿಸಿ ನೌಕರರು ಮತ್ತು ಅವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ.25ರಂದು ರಿಯಾಯಿತಿ ಇರುತ್ತದೆ. ಕೋವಿಡ್-19ನಿಂದ ಮರಣ ಹೊಂದಿದ ಪಾಲಕರಿಗೆ ಸಂಬಂಧಿಸಿದಂತೆ ಅವರ ಮಕ್ಕಳಿಗೆ ಮತ್ತು ತೃತೀಯ ಲಿಂಗಿ, ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ಕಲ್ಪಿಸಲಾಗಿದೆ. ಎಸ್‌ಸಿ/ಎಸ್‌ಟಿ/ಒಬಿಸಿ ವಿದ್ಯಾರ್ಥಿಗಳು ಅಗತ್ಯ ದಾಖಲೆ ಒದಗಿಸಿದಲ್ಲಿ ಸರ್ಕಾರದ ಎಸ್‌ಎಸ್‌ಪಿ ಮುಖಾಂತರ ವಿದ್ಯಾರ್ಥಿ ವೇತನ ಪಡೆಯಬಹುದು.
ಮಾಹಿತಿಗೆ ಮೊ.ಸಂ 9741990284, 9916894579, 9606961490, 9341555676 ಅಥವಾ ಕಚೇರಿಯ ದೂ.ಸಂ 08232-200862 ಸಂಪರ್ಕಿಸಬಹುದೆಂದು ವಿವಿಯ ಪ್ರಾದೇಶಿಕ ನಿರ್ದೇಶಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.