ಬನ್ನೇರುಘಟ್ಟ ಪ್ರವಾಸಿಗರಿಗೆ ಮುಕ್ತ, ಆನ್‌ಲೈನ್‌ನಲ್ಲೂ ಟಿಕೆಟ್ ವ್ಯವಸ್ಥೆ ವಿಜಯವಾಣಿ ಸುದ್ದಿಜಾಲ ಆನೇಕಲ್

bannerugatta
Published on

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನ ಸೋಮವಾರ ಪ್ರಾಣಿ ಪ್ರಿಯರಿಗೆ ಮುಕ್ತವಾಗಿದೆ. ಉದ್ಯಾನವನದ ಕಾರ‌್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್‌ಸಿಂಗ್ ಪ್ರವೇಶ ದ್ವಾರದಲ್ಲಿ ಪ್ರವಾಸಿಗರನ್ನು ಸ್ವಾಗತಿಸಿದರು.

ಪ್ರವಾಸಿಗರ ಸಂಖ್ಯೆ ಮಿತಿ ಮಾಡಿರುವುದರಿಂದ ಪ್ರಾಣಿ ಪ್ರಿಯರು, ಪ್ರವಾಸಿಗರು ಉದ್ಯಾನವನಕ್ಕೆ ಭೇಟಿ ನೀಡಲು ಇದು ಉತ್ತಮವಾದ ಸಮಯ ಎಂದು ವನಶ್ರೀ ವಿಪಿನ್‌ಸಿಂಗ್ ಹೇಳಿದರು.

ಪ್ರವಾಸಿಗರ ವಾಹನಗಳಿಗೆ ಔಷಧ ಸಿಂಪಡಿಸಿ ನಂತರ ನಿಲ್ದಾಣದಲ್ಲೂ ಅಂತರ ಕಾಪಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್ ಕೌಂಟರ್ ಬಳಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು, ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಆನ್‌ಲೈನ್‌ನಲ್ಲೂ ಟಿಕೆಟ್ ವ್ಯವಸ್ಥೆ ಇದ್ದು, ಒಂದು ಗಂಟೆ ಮೊದಲು ಟಿಕೆಟ್ ಬುಕ್ ಮಾಡಬೇಕು. ಇದರಲ್ಲೂ ರಿಯಾಯಿತಿ ಇದೆ. ಸಾರಿ ವಾಹನದಲ್ಲಿ ಶೇ.50 ಪ್ರವಾಸಿಗರಿಗೆ ಅವಕಾಶ ನೀಡಿರುವುದರಿಂದ ಎಲ್ಲರಿಗೂ ಕಿಟಕಿ ಬಳಿ ಸೀಟ್ ಸಿಗಲಿದೆ. ಪ್ರಾಣಿಗಳನ್ನು ಖುಷಿಯಿಂದ ನೋಡಬಹುದಾಗಿದೆ ಎಂದರು.

25 ಲಕ್ಷ ದತ್ತು ಹಣ: ಲಾಕ್‌ಡೌನ್ ಸಮಯದಲ್ಲಿ ದೇಶದ ವಿವಿಧ ಕಡೆಗಳಿಂದ ನೂರಕ್ಕೂ ಹೆಚ್ಚು ಜನರು ನೂರ ಇಪ್ಪತ್ತು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಇದರಿಂದ ಸುಮಾರು 25 ಲಕ್ಷ ರೂ. ಆದಾಯ ಬಂದಿದೆ ಎಂದರು.

ಪ್ರಥಮ ದಿನ ಮೃಗಾಲಯಕ್ಕೆ 68 ಪ್ರವಾಸಿಗರು, ಸಫಾರಿ, ಚಿಟ್ಟೆ ಉದ್ಯಾನವನ ಮೃಗಾಲಯ ವೀಕ್ಷಣೆಗೆ 35 ಪ್ರವಾಸಿಗರು ಸೇರಿ 103 ಮಂದಿ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net