ವಾರ್ಷಿಕ ಮಹೋತ್ಸವಕ್ಕೆ ತೆರೆ

13vpt1 loordu mathe (1)
Published on

ವಿರಾಜಪೇಟೆ: ಇಲ್ಲಿನ ಸಂತ ಅನ್ನಮ್ಮ ದೇವಾಲಯದಲ್ಲಿ ನಡೆದ ಲೂರ್ದು ಮಾತೆ ಹಾಗೂ ಸಂತ ಅನ್ನಮ್ಮನವರ ವಾರ್ಷಿಕ ಮಹೋತ್ಸವಕ್ಕೆ ಗುರುವಾರ ತೆರೆ ಬಿದ್ದಿದೆ.

ಫೆ.10ರಿಂದ 13 ರವರೆಗೆ ನಡೆದ ವಾರ್ಷಿಕ ಮಹೋತ್ಸವದಲ್ಲಿ ಜಪಸರ, ದಿವ್ಯ ಬಲಿಪೂಜೆಯೊಂದಿಗೆ ಮಕ್ಕಳಿಗೆ ಪರಮ ಪ್ರಸಾದ- ಸಂಸ್ಕಾರ ಮಾಡಲಾಯಿತು. ಮೈಸೂರು ಧರ್ಮ ಪ್ರಾಂತ್ಯದ ಧರ್ಮಗುರು ಗುರುಸ್ವಾಮಿ ಸಿ.ರಾಯಪ್ಪ ಅವರಿಂದ ಆಡಂಬರ ಗಾಯನ ನಡೆಯಿತು.

ಮೇಣದ ಬತ್ತಿ ಹಿಡಿದು ವಾದ್ಯಗೋಷ್ಠಿಯೊಂದಿಗೆ ದೇವಾಲಯ ಆವರಣದಿಂದ ಮೆರವಣಿಗೆ ಹೊರಟ ಕ್ರೈಸ್ತರು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದರು. ಈ ಸಂದರ್ಭ ವೀರಾಜಪೇಟೆ ಧರ್ಮಗುರು ಮದುಲೈಮುತ್ತು, ಸಹಾಯಕ ಗುರು ರೋಷನ್ ಬಾಬು ಇತರರು ಹಾಜರಿದ್ದರು.

ಸುಸಂಸ್ಕೃತ ಜೀವನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಹೀಗಾಗಿ ಮಕ್ಕಳಿಗೆ ಸಂಸ್ಕೃತಿ ಕಲಿಸಬೇಕು. ಜತೆಗೆ ಗುರು ಹಿರಿಯರನ್ನು ಗೌರವದಿಂದ ಕಾಣುವಂತೆ ಅವರಿಗೆ ತಿಳಿ ಹೇಳಬೇಕು ಎಂದು ಧರ್ಮಗುರು ಸ್ವಾಮಿ ಸಿ.ರಾಯಪ್ಪ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net