

ಕೆ.ಎಂ.ದೊಡ್ಡಿ: ಭಾರತೀ ಕಾಲೇಜಿನ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ ನಡೆದ ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಮತ್ತು ಅಂತರ ವಲಯ ಮಹಿಳಾ ಕ್ರೀಡಾಕೂಟಕ್ಕೆ ಗುರುವಾರ ತೆರೆ ಬಿದ್ದಿದೆ.
ಮೈಸೂರು ವಿವಿಯ ದೈಹಿಕ ಶಿಕ್ಷಣ ಕ್ರೀಡಾ ವಿಜ್ಞಾನ ಮತ್ತು ಅಧ್ಯಯನ ವಿಭಾಗ ಅಧ್ಯಕ್ಷ ಡಾ.ಸಿ.ವೆಂಕಟೇಶ್ ಮಾತನಾಡಿ, ಕ್ರೀಡಾಕೂಟ ದಲ್ಲಿ 650ಕ್ಕೂ ಹೆಚ್ಚು ಮಹಿಳಾ ಕ್ರೀಡಾಪಟುಗಳು ಭಾಗವಹಿಸಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾಜನ ಕಾಲೇಜಿನ ವಿದ್ಯಾರ್ಥಿನಿ ತೇಜಸ್ವಿನಿ, ಮಂಡ್ಯ ಸ್ವಾಯತ್ತ ಕಾಲೇಜಿನ ಆಫಿಯಾ, ಮೈಸೂರಿನ ಬಿಜಿಎಸ್ ಕಾಲೇಜಿನ ಗೀತಾ ಕ್ರೀಡಾಕೂಟದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧು ಜಿ.ಮಾದೇಗೌಡ ವಹಿಸಿದ್ದರು. ಸ್ಫರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಸಂಸ್ಥೆ ಕಾರ್ಯದರ್ಶಿಬಿ.ಎಂ ನಂಜೇಗೌಡ ಬಹುಮಾನ ವಿತರಿಸಿದರು.
ಕ್ರೀಡಾಕೂಟದಲ್ಲಿ 26 ಅಂಕ ಪಡೆಯುವ ಮೂಲಕ ಮೈಸೂರಿನ ಮಾನಸ ಗಂಗೋತ್ರಿಯ ಸ್ನಾತಕೋತ್ತರ ಕೇಂದ್ರದ ತಂಡವು ಚಾಂಪಿಯನ್ ಪ್ರಶಸ್ತಿಗೆ ಪಾತ್ರವಾಯಿತು.ಟೆರಿಷಿಯನ್ ಕಾಲೇಜು ದ್ವಿತೀಯ ಮತ್ತು ಎಸ್‌ಬಿಆರ್‌ಆರ್ ಮಹಾಜನ ಕಾಲೇಜು ತೃತೀಯ ಬಹುಮಾನ ಪಡೆಯಿತು.
ಕಾಲೇಜು ಪ್ರಾಂಶುಪಾಲ ಪ್ರೊ.ಮಾಯಿಗೌಡ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪೊ.ಎಸ್.ನಾಗರಾಜು, ಭಾರತೀ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುನೀಲ್ ಕುಮಾರ್, ಪ್ರೊ.ಬಿ.ಎಸ್.ಬೋರೇಗೌಡ, ಡಾ. ಎಸ್.ಶಿವಸ್ವಾಮಿ ಇದ್ದರು.