ಮಂಗಳೂರಿನಲ್ಲಿ ಸರ್ಫಿಂಗ್‌ ಚಾಂಪಿಯನ್‌ಶಿಪ್‌ಗೆ ಉತ್ತಮ ಸ್ಪಂದನೆ

Published on

ಮಂಗಳೂರು: ಮಂಗಳೂರು ಸರ್ಫಿಂಗ್‌ ಕ್ಲಬ್‌ ವತಿಯಿಂದ ಮೊದಲ ಬಾರಿಗೆ ಓಪನ್ ಸರ್ಫಿಂಗ್‌ ಚಾಂಪಿಯನ್‌ಶಿಪ್‌ ತಣ್ಣೀರುಬಾವಿ ಕಡಲತೀರದಲ್ಲಿ ನಡೆದಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯದ ಐದಕ್ಕೂ ಹೆಚ್ಚು ಸರ್ಫಿಂಗ್‌ ಶಾಲೆಯ ಸದಸ್ಯರು ಆಗಮಿಸಿದ್ದರು.
ಮುಂಜಾನೆ 7ರಿಂದ ವಿವಿಧ ವಯೋಮಾನದ ಪ್ರಾರಂಭಗೊಂಡಿದ್ದು 11ರ ವರೆಗೂ ನಡೆಯಿತು. ತಣ್ಣೀರುಬಾವಿ ಬೀಚ್‌ನ್ನು ವಿಶ್ವದ ಪ್ರಮುಖ ಸರ್ಫಿಂಗ್‌ ತಾಣವನ್ನಾಗಿ ಮಾಡುವುದು, ಸರ್ಫಿಂಗ್‌ ಕುರಿತು ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಈ ಚಾಂಪಿಯನ್‌ಶಿಪ್‌ ಆಯೋಜಿಸಲಾಗಿದೆ ಎಂದು ಸಂಘಟಕ ಮಿಥುನ್‌ ಭಟ್‌ ಕಾಕುಂಜೆ ತಿಳಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net