ಓಪನ್ ರ್ಯಾಪಿಡ್ ಚೆಸ್ ಟೂರ್ನಾಮೆಂಟ್

13 ylp 01 (chess)
Published on

ಯಲ್ಲಾಪುರ: ವೃತ್ತಿಯಲ್ಲಿ ಗಳಿಸಿದ ಹಣವನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸಲು ಹಿಂದೇಟು ಹಾಕುವವರ ನಡುವೆ, ವಿದ್ಯುತ್ ಗುತ್ತಿಗೆದಾರರ ಸಂಘ ಗಳಿಸಿದ ಹಣವನ್ನು ಸತ್ಕಾರ್ಯಕ್ಕೆ ಬಳಸುತ್ತಿರುವುದು ಮಾದರಿಯಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಎರಡನೇ ವರ್ಷದ ಓಪನ್ ರ್ಯಾಪಿಡ್ ಚೆಸ್ ಟೂರ್ನಾಮೆಂಟ್ ಉದ್ಘಾಟಿಸಿ ಅವರು ಮಾತನಾಡಿದರು.

ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಬೆಳಕಿಗಾಗಿ ಶ್ರಮಿಸಿ ಜನರಿಗೆ ಬೆಳಕು ತೋರುವ ಲೈನ್​ವೆುನ್​ಗಳನ್ನು ಸನ್ಮಾನಿಸಿ ಅವರನ್ನು ಬೆಳಕಿಗೆ ತಂದಿರುವುದು ಔಚಿತ್ಯಪೂರ್ಣ ಎಂದರು.

ಸ್ಪೋರ್ಟ್ಸ್ ಕ್ಲಬ್​ನ ಪ್ರಕಾಶ ಮಾಲಶೇಟ, ಸುರೇಶ ಪೈ, ಸಾಮಾಜಿಕ ಕಾರ್ಯಕರ್ತ ಶಿವರಾಮ ಹೆಗಡೆ, ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಅನು ಕಾಮತ್ ಅವರನ್ನು ಸನ್ಮಾನಿಸಲಾಯಿತು. ಹೆಸ್ಕಾಂ ಲೈನ್​ವೆುನ್ ಹಾಗೂ ಸಿಬ್ಬಂದಿಯನ್ನು ಗೌರವಿಸಲಾಯಿತು.

ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ತಾಲೂಕಾಧ್ಯಕ್ಷ ವೇಣುಗೋಪಾಲ ಮದ್ಗುಣಿ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಚದುರಂಗ ಸಂಘದ ಕಾರ್ಯದರ್ಶಿ ನವೀನ ಶ್ರೀನಿವಾಸ ಹೆಗಡೆ, ಹೆಸ್ಕಾಂ ನೌಕರರ ಸಂಘದ ಶೇಖರಪ್ಪ ಯೆರಗೇರಿ, ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಅಂತಾರಾಷ್ಟ್ರೀಯ ಚೆಸ್ ಆಟಗಾರ ರಾಮಚಂದ್ರ ಭಟ್ಟ, ಇತರರಿದ್ದರು. ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ನಿರ್ವಹಿಸಿದರು. ಟೂರ್ನಾಮೆಂಟ್​ನಲ್ಲಿ ಜಿಲ್ಲೆಯ ವಿವಿಧೆಡೆಯ 158 ಮಕ್ಕಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net