ಟೀಮ್ ಶುಂಠಿ ತಂಡ ಫುಟ್ಬಾಲ್ ಚಾಂಪಿಯನ್

8spt3
Published on

ಸೋಮವಾರಪೇಟೆ: ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿ ವತಿಯಿಂದ ಜಾತ್ರೋತ್ಸವ ಅಂಗವಾಗಿ ಬಿಜಿಎಸ್ ಶಾಲಾ ಮೈದಾನದಲ್ಲಿ ಗುರುವಾರ ಸಂಜೆ ನಡೆದ ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ಟೀಮ್ ಶುಂಠಿ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಶನಿವಾರಸಂತೆ ನಿಶಾಂತ್ ಕಾಫಿ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು.

ರೋಚಕ ಫೈನಲ್‌ನಲ್ಲಿ ಟೀಮ್ ಶುಂಠಿ ತಂಡ 5-4 ಗೋಲುಗಳ ಅಂತರದಲ್ಲಿ ಶನಿವಾರಸಂತೆ ನಿಶಾಂತ್ ಕಾಫಿ ತಂಡ ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು ಇದಕ್ಕೂ ಮುನ್ನ ಬಿಎಫ್‌ಸಿಸಿ ಬೀಟಿಕಟ್ಟೆ ತಂಡದ ವಿರುದ್ಧ ಟೀಮ್ ಶುಂಠಿ ತಂಡ 4-3 ಗೋಲುಗಳ ಅಂತರದಲ್ಲಿ ಗೆಲವು ಸಾಧಿಸಿ ಫೈನಲ್ ತಲುಪಿತ್ತು. 2ನೇ ಸೇಮಿಸ್‌ನಲ್ಲಿ ನಿಶಾಂತ್ ಕಾಫಿ ತಂಡ ವಿಜಯನಗರ ಮೈಸೂರು ತಂಡವನ್ನು 2-0 ಗೋಲುಗಳಿಂದ ಮಣಿಸಿ ಫೈನಲ್‌ಗೇರಿತ್ತು.

ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮಂಗಳೂರು ತಂಡ ಪ್ರಶಸ್ತಿ ಪಡೆದುಕೊಂಡಿತು. ಗೌಡಳ್ಳಿ ಥ್ರೋಬಾಲ್ ಟೀಮ್ ದ್ವಿತೀಯ ಸ್ಥಾನ ಪಡೆಯಿತು. ಶಾಸಕ ಡಾ.ಮಂತರ್‌ಗೌಡ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಎಸ್.ಬಿ.ಗುರುಪ್ರಸಾದ್, ಉಪಾಧ್ಯಕ್ಷ ಕೂಗೂರು ಸುಮಂತ್, ಪ್ರಮುಖರಾದ ಎಸ್.ಬಿ.ಭರತ್ ಕುಮಾರ್, ಜಿ.ಎ.ಮಹೇಶ್, ಎಚ್.ಆರ್.ಮುತ್ತಣ್ಣ, ಪರಮೇಶ್, ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್, ದಿನೇಶ್, ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net