

ತಿ.ನರಸೀಪುರ: ಪುರಸಭೆ ವ್ಯಾಪ್ತಿಯ ಪಟ್ಟಣದಲ್ಲಿ ನೆಲಸುಂಕ ವಸೂಲಿಗೆ ಬುಧವಾರ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು.
ಪಟ್ಟಣದ ಸಿಡಿಎಸ್ ಭವನದಲ್ಲಿ ಪುರಸಭೆ ಪುರಸಭಾ ಅಧ್ಯಕ್ಷೆ ಬಿ.ವಸಂತ ಶ್ರೀಕಂಠ ಅಧ್ಯಕ್ಷತೆಯಲ್ಲಿ ಮುಖ್ಯಾಧಿಕಾರಿ ಬಿ.ಕೆ.ವಸಂತ ಕುಮಾರಿ ಅವರು ಹರಾಜು ಪ್ರಕ್ರಿಯೆ ನಡೆಸಿದರು. ನೆಲ ಬಾಡಿಗೆ ಸುಂಕ ವಸೂಲಾತಿಯನ್ನು ಆರ್.ಮಣಿಕಂಠರಾಜ್‌ಗೌಡ ಅವರಿಗೆ 8 ಲಕ್ಷದ 3 ಸಾವಿರ ರೂ.ಗೆ ಟೆಂಡರ್ ನೀಡಲಾಯಿತು.
ಮೇ 1ರಿಂದ 2026ರ ಮಾ 3 ರವರೆಗೆ ಟೆಂಡರ್ ಅವಧಿ ಷರತ್ತುಗಳನ್ನು ಪಾಲಿಸಿ, ಸುಂಕ ವಸೂಲಿ ಮಾಡಲು ಮಣಿಕಂಠರಾಜ್‌ಗೌಡ ಅವರಿಗೆ ಪುರಸಭೆಯಿಂದ ಅನುಮತಿ ನೀಡಿತು.
ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರಕಾಶ್, ಸದಸ್ಯರಾದ ಎಸ್.ಕೆ.ಕಿರಣ್, ಎಸ್.ಮದನ್ ರಾಜ್, ಆರ್.ನಾಗರಾಜು, ಸಮುದಾಯದ ಸಂಘಟಕ ಕೆ.ಮಹದೇವ, ಆರ್‌ಓ ತ್ರಿವೇಣಿ, ಕಚೇರಿ ವ್ಯವಸ್ಥಾಪಕ ಮಹೇಂದ್ರ, ಆಶಾ ಇತರರು ಇದ್ದರು.