

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಗ್ರಾಮ ಪಂಚಾಯಿತಿಗಳಲ್ಲಿ ಸಂಪನ್ಮೂಲ ಕ್ರೂಢೀಕರಣ ಮಾಡಿದರೆ, ಅಭಿವೃದ್ಧಿ ಮಾಡಲು ಆರ್ಥಿಕ ಬಲ ದೊರೆಯುತ್ತದೆ ಎಂದು ಬಯಪ ಅಧ್ಯಕ್ಷ ಶಾಂತ ಕುಮಾರ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಕೇಂದ್ರದಲ್ಲಿ ಸೋಮವಾರ ಅಂಗಡಿ ಮಳಿಗೆ ಉದ್ಘಾಟಿಸಿ ಮಾತನಾಡಿದರು.
ಪಂಚಾಯಿತಿ ಅನುದಾನದಲ್ಲಿ 22.50 ಲಕ್ಷ ರೂ.ವೆಚ್ಚದಲ್ಲಿ ಅಂಗಡಿ ಮಳಿಗೆಗಳ ನಿರ್ಮಾಣ ಮಾಡಲಾಗಿದೆ. ಇದರಿಂದ ಬರುವ ಮಾಸಿಕ ಆದಾಯ ಪಂಚಾಯಿತಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ರಾಜಣ್ಣ ಮಾತನಾಡಿ, ಇಡೀ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆ ಚನ್ನರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಜಾರಿಯಾಗಿದೆ. ಸಾಕಷ್ಟು ಜನರಿಗೆ ಆಸರೆಯಾಗಿದೆ ಎಂದರು.
ಚನ್ನರಾಯಪಟ್ಟಣ ಗ್ರಾಪಂ ಅಧ್ಯಕ್ಷ ಮಾರೇಗೌಡ ಮಾತನಾಡಿ, ಬಯಪದಿಂದ ಸೀ ಶಕ್ತಿ ಭವನ ಸೇರಿ ಸಾರ್ವಜನಿಕರಿಗೆ ಉಪಯೋಗಿ ಭವನಗಳ ನಿರ್ಮಾಣಕ್ಕೆ ಸಹಾಯಧನ ನೀಡಿದರೆ ಸ್ಥಳೀಯರಿಗೆ ಅನುಕೂಲವಾಗಲಿದೆ. ಮನವಿಯನ್ನು ಪರಿಶೀಲಿಸಬೇಕು ಎಂದು ಮನವಿ ನೀಡಿದರು.
ಮುಖಂಡರಾದ ಬಚ್ಚೇಗೌಡ, ತಾಪಂ ಮಾಜಿ ಸದಸ್ಯ ದಿನ್ನೂರು ವೆಂಕಟೇಶ್, ಜೆಡಿಎಸ್ ಹೋಬಳಿ ಅಧ್ಯಕ್ಷ ಮುನಿರಾಜು, ಗ್ರಾಪಂ ಉಪಾಧ್ಯಕ್ಷೆ ರತ್ನಮ್ಮ, ಗ್ರಾಪಂ ಸದಸ್ಯರಾದ ಮಂಜುನಾಥ್, ದೀಪಾ, ಬಿ.ಕೆ.ಮಂಜುನಾಥ್, ಮುನಿಲಕ್ಷ್ಮಮ್ಮ, ಚಂದ್ರಕಲಾ, ಚನ್ನಕೇಶವ, ಗೌರಮ್ಮ, ಲಕ್ಷ್ಮಮ್ಮ, ಶಿವಕುಮಾರ್, ಶಿಲ್ಪಾ, ಶಾಂತಮ್ಮ, ರಾಜಾನಂದಗೌಡ, ಲಕ್ಷ್ಮೀ, ಪಿಡಿಒ ಸಿ.ಮುನಿರಾಜು ಇದ್ದರು.