ಬಲೆ ನೇಯಲು ಹೊಸ ಶೆಡ್ ನಿರ್ವಿುಸಿಕೊಡಿ

30KMT1_Manavi fish
Published on

ಕುಮಟಾ: ತಾಲೂಕಿನ ಹೊಲನಗದ್ದೆಯ ಮೀನುಗಾರರು ಶನಿವಾರ ಶಾಸಕ ದಿನಕರ ಶೆಟ್ಟಿ ಅವರನ್ನು ಭೇಟಿಯಾಗಿ, ಹೊಲನಗದ್ದೆಯಲ್ಲಿ ಮೀನುಗಾರರು ಬಲೆ ನೇಯುವ ಶೆಡ್ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಶೆಡ್ ನಿರ್ವಣಕ್ಕೆ ಸರ್ಕಾರದಿಂದ ಅನುದಾನ ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು.


ಹೊಲನಗದ್ದೆಯಲ್ಲಿ ಹತ್ತಾರು ವರ್ಷಗಳ ಹಿಂದೆ ನಿರ್ವಿುಸಿದ್ದ ಬಲೆ ನೇಯುವ ಶೆಡ್ ಶಿಥಿಲವಾಗಿದೆ. ಮಳೆಯಿಂದ ಸೋರುವ ಹಂತ ತಲುಪಿದ್ದು, ಸ್ಥಳಾವಕಾಶವೂ ಸಾಲುತ್ತಿಲ್ಲ. ಹೀಗಾಗಿ ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಈ ಭಾಗದ ಮೀನುಗಾರರಿಗೆ ಮಳೆಗಾಲದ ಸಂದರ್ಭದಲ್ಲಿ ಬಲೆ ನೇಯುವ ಹಾಗೂ ಇತರ ಪೂರಕ ಕೆಲಸಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಶೆಡ್ ನಿರ್ವಿುಸಿಕೊಡಬೇಕು ಎಂದು ವಿನಂತಿಸಲಾಯಿತು.


ಹೊಲನಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಹೆಗಡೆ, ಉಪಾಧ್ಯಕ್ಷ ಮಹಾಂತೇಶ ಹರಿಕಾಂತ, ಸದಸ್ಯರಾದ ದೀಪಾ ಹಿಣಿ, ದತ್ತಾತ್ರೇಯ ಪಟಗಾರ, ಮೀನುಗಾರ ಸಮಾಜದ ಬೀರಪ್ಪ ಹರಿಕಾಂತ, ಶಿವಾನಂದ ಹರಿಕಾಂತ, ಮಹಾಬಲೇಶ್ವರ ಹರಿಕಾಂತ, ವಾಮನ ಹರಿಕಾಂತ, ಸುರೇಶ ಹರಿಕಾಂತ ಇನ್ನಿತರರು ಇದ್ದರು.

ಸಮುದಾಯ ಭವನ ಜಾಗ ಖರೀದಿಗೆ 5 ಲಕ್ಷ ರೂ.
ತಾಲೂಕು ಹರಿಕಂತ್ರ ಮೀನುಗಾರ ಸಮಾಜದ ಅಭಿವೃದ್ಧಿ ಒಕ್ಕೂಟದಿಂದ ಸಮುದಾಯ ಭವನ ನಿರ್ವಣಕ್ಕೆ ಜಾಗ ಖರೀದಿಗೆ ನಿಖಿಲ್ ದಿನಕರ ಶೆಟ್ಟಿ ಫೌಂಡೇಶನ್ ವತಿಯಿಂದ ಶನಿವಾರ 5 ಲಕ್ಷ ರೂ. ಚೆಕ್ ಅನ್ನು ಒಕ್ಕೂಟದ ಅಧ್ಯಕ್ಷ ಜಗದೀಶ್ ಹರಿಕಂತ್ರ ಅವರಿಗೆ ನೀಡಿದರು. ಈಗಾಗಲೇ ಒಕ್ಕೂಟಕ್ಕೆ ಫೌಂಡೇಶನ್ ವತಿಯಿಂದ 10 ಲಕ್ಷ ರೂ. ನೀಡಲಾಗಿದೆ. ಈ ಮತ್ತೆ 5 ಲಕ್ಷ ರೂ. ನೀಡಲಾಗಿದೆ. ಹರಿಕಂತ್ರ ಸಮಾಜದ ಬೀರಪ್ಪ ಈರಾ ಹರಿಕಂತ್ರ, ಶಿವರಾಮ ನಾಗಪ್ಪ ಹರಿಕಂತ್ರ, ನಾಗಪ್ಪ ಶಿವಪ್ಪ ಹರಿಕಂತ್ರ, ಲಕ್ಷ್ಮಣ ನಾರಾಯಣ ಹರಿಕಂತ್ರ, ಸುರೇಶ ಪುರಸು ಹರಿಕಂತ್ರ, ಶ್ರೀಧರ ನಾರಾಯಣ ಹರಿಕಂತ್ರ, ವಾಮನ ಕನ್ನಾ ಹರಿಕಂತ್ರ, ಮಹೇಶ ಪರಮೇಶ್ವರ ಹರಿಕಂತ್ರ, ಮಹದೇವ ಸೇರುಗಾರ ಹರಿಕಂತ್ರ, ಲಕ್ಷ್ಮೀಧರ ಹರಿಕಂತ್ರ, ಈಶ್ವರ ಹರಿಕಂತ್ರ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net