ಒಪಿಡಿ ಸೇವೆ ಬಂದ್​

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕಿಯ ಸಂಘ (ಐಎಂಎ)ದ ಧಾರವಾಡ ಶಾಖೆ ವತಿಯಿಂದ ಆ. 17ರಿಂದ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಬಂದ್​ ಮಾಡಲಾಗಿದೆ.
ಐಎಂಎ, ಆಯುಷ್​ ಫೆಡರೇಷನ್​ ಆಫ್ ಇಂಡಿಯಾ ಮತ್ತು ಶ್ರೀಯಾ ಕಾಲೇಜ ಸಹಯೋಗದಲ್ಲಿ ಆ. 17ರ ಬೆಳಗ್ಗೆ 6 ಗಂಟೆಯಿಂದ ಆ. 18ರ ಬೆಳಗ್ಗೆ 6ರವರೆಗೆ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಹೊರತುಪಡಿಸಿ ಒಪಿಡಿ ಸೇವೆ ಬಂದ್​ ಇರಲಿವೆ. ಆ. 17ರಂದು ಬೆಳಗ್ಗೆ 10 ಗಂಟೆಗೆ ಕಲಾಭವನ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಐಎಂಎ ಅಧ್ಯಕ್ಷ ಡಾ. ಸತೀಶ ಇರಕಲ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net