ಜ್ಞಾನದಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ

23kls2
Published on

ಕಳಸ: ಹಿಂದಿನ ನೀಡುತ್ತಿದ್ದ ವಿದ್ಯಾಭ್ಯಾಸದಲ್ಲಿ ಕಠಿಣವಾದ ಪರಿಶ್ರಮವಿತ್ತು. ಆದ್ದರಿಂದ ಇಂದು ನಾವು ಸಮಾಜದಲ್ಲಿ ಧೃಡವಾಗಿ ನಿಲ್ಲಲು ಸಾಧ್ಯವಾಗಿದೆ ಎಂದು ಹೊರನಾಡು ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಹೇಳಿದರು.

ತಾಲೂಕಿನ ಮರಸಣಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ನೇಹ ಸಮ್ಮಿಲನ ಶತಮನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನ ಚೆನ್ನಾಗಿದ್ದರೆ ಮಾತ್ರ ನಾವು ಯಾವ ಕ್ಷೇತ್ರದಲ್ಲೂ ಕೂಡ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ನಾವು ಜ್ಞಾನವಂತರಾಗಬೇಕು, ಒಳ್ಳೆಯ ಗುರುವಿದ್ದಾಗ ಸಮಾಜದಲ್ಲಿ ಸೃಜನಶೀಲವಾದ ವಾತಾವರಣ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹೊರನಾಡು ದೇವಸ್ಥಾನದ ಟ್ರಸ್ಟಿ ರಾಜಲಕ್ಷ್ಮೀ ಜೋಷಿ ಮಾತನಾಡಿ, ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿರುವ ಕಾಲ ಘಟ್ಟದಲ್ಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಿ ಶತಮಾನೋತ್ಸವ ಆಚರಿಸುತ್ತಿರುವುದು ಸಂತೋಷದ ಸಂಗತಿ. ಗುರುವಿನ ಬೆಳಕಿನಿಂದ ಒಬ್ಬ ವಿದ್ಯಾರ್ಥಿಯು ಸಮಾಜಕ್ಕೆ ಒಂದು ಬೆಳಕಾಗಿ ಬೆಳೆಯಲು ಸಾಧ್ಯ. ನಮ್ಮ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರಬೇಕು ಎನ್ನುವ ದೃಷ್ಠಿಯಿಂದ ಪಾಲಕರಿಗಿಂತ ಹೆಚ್ಚಾಗಿ ಶಿಕ್ಷಕರು ಪ್ರಯತ್ನ ಪಡುತ್ತಿರುವುದರಿಂದ ಇಂತಹ ಶಾಲೆಗಳು ಚೆನ್ನಾಗಿ ನಡೆಯುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ಏನು ಕಲಿಯುತ್ತೇವೆಯೋ ಅದೇ ನಮ್ಮ ಮುಂದಿನ ಜೀವನಕ್ಕೆ ಭದ್ರ ಬುನಾಯಾಗುತ್ತದೆ ಎಂದು ಹೇಳಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ್, ವರ್ಧಮಾನಯ್ಯ, ಕೆ.ಎ.ಶ್ರೇಣಿಕ್, ವಿಶ್ವನಾಥ್, ಸೂಕ್ತ ಜಿ ಗೌಡ, ಪದ್ಮರಾಜಯ್ಯ, ಸನತ್ ಕುಮಾರ್, ಗುಣವತಿ ಕುಂದರ್, ಹಿರೇಬೈಲ್ ಕ್ಲಸ್ಟರ್ ಸಿಆರ್‌ಪಿ ರಂಗನಾಥ್, ಶಾಲೆ ಮುಖ್ಯಶಿಕ್ಷಕ ಉದಯ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net