ಸಿದ್ದರಾಮಯ್ಯ ಒಬ್ಬರು ಬಿಟ್ಟು ಎಲ್ಲರೂ ಅದನ್ನು ಪಾಲಿಸುತ್ತಿದ್ದಾರೆ: ಸಂಸದ ಮುನಿಸ್ವಾಮಿ ಹೀಗಂದಿದ್ದೇಕೆ?

Published on

ಕೋಲಾರ: ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ಮೊಟ್ಟೆ-ಮಾಂಸಾಹಾರದ್ದೇ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಪ್ರವೇಶಿಸಿದ ವಿಚಾರವಾಗಿ ಸಿದ್ದರಾಮಯ್ಯ ಈಗಾಗಲೇ ಭಾರಿ ಟೀಕೆಗೆ ಒಳಗಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಮುನಿಸ್ವಾಮಿ ಕೂಡ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವಿಷಯದ ಕುರಿತಾಗಿ ಕೋಲಾರದಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ, ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಮಾಂಸಾಹಾರ ತಿಂದು ಹೋದಾಗ ಅದಕ್ಕೆ ದೇವರಿಂದ ಶಿಕ್ಷೆ ಆಗಿದೆ. ಅದಾಗ್ಯೂ ದೇಶ ಹಾಗೂ ಧರ್ಮದ ವಿಚಾರ ಮಾತನಾಡಿಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ದೇವಸ್ಥಾನ, ಮಸೀದಿ ಹಾಗೂ ಚರ್ಚ್​ಗೆ ಹೋಗಬೇಕು ಎಂದರೆ ನಿಯಮ ಇರುತ್ತದೆ. ಅದನ್ನು ಸಿದ್ದರಾಮಯ್ಯ ಒಬ್ಬರು ಬಿಟ್ಟು ಉಳಿದ ಎಲ್ಲರೂ ಪಾಲಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸಹೋದರರು ಸಹ ಹಿಂದೂ ಧರ್ಮ ಪಾಲನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಏನೂ ಮೇಲಿನಿಂದ ಇಳಿದು ಬಂದಿಲ್ಲ. ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆಗಿದೆ. ಆಗ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗಬೇಕಿತ್ತು ಎಂದು ಅವರು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net