ಆಸ್ತಿ ಮೌಲ್ಯಮಾಪಕರ ಮಾತ್ರ ಮಹತ್ವದ್ದು

h24-IOV
Published on

ಹುಬ್ಬಳ್ಳಿ: ಬ್ಯಾಂಕ್ ವ್ಯವಹಾರಗಳಲ್ಲಿ ಆಸ್ತಿ ಮೌಲ್ಯಮಾಪಕರ ಪಾತ್ರ ಮಹತ್ವದ್ದು ಎಂದು ಬ್ಯಾಂಕ್ ಆಫ್ ಇಂಡಿಯಾ ವಿಭಾಗೀಯ ವ್ಯವಸ್ಥಾಪಕ ತರಿಣಿ ಚರಣ್ ಸಾಹು ಅಭಿಪ್ರಾಯಪಟ್ಟರು.

ಇಲ್ಲಿಯ ದೇಶಪಾಂಡೆ ನಗರದ ಕರ್ನಾಟಕ ಜಿಮ್ಖಾನ ಕ್ಲಬ್‌ನಲ್ಲಿ ಇನ್‌ಸ್ಟಿಟ್ಯೂಷನ್ ಆಫ್ ವ್ಯಾಲ್ಯೂವರ್ಸ್‌ ಹುಬ್ಬಳ್ಳಿ ಶಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮಗೆ ಹೊಸ ಪ್ರದೇಶ ಯಾವುದೇ ಇರಲಿ. ವಕೀಲರ ನಂತರ ನಂಬುವ ವ್ಯಕ್ತಿಗಳು ಆಸ್ತಿ ಮೌಲ್ಯಮಾಪಕರು. ಅವರ ನಂತರ ದಾಖಲಾತಿಗಳು ನಮ್ಮ ಬಳಿ ಬಂದರೆ, ಅದೇ ಆಧಾರದಲ್ಲಿ ಲೋನ್ ಬಿಡುಗಡೆ ಮಾಡಲಾಗುತ್ತದೆ ಎಂದರು.

ಇನ್‌ಸ್ಟಿಟ್ಯೂಷನ್ ಆಫ್ ವ್ಯಾಲ್ಯೂವರ್ಸ್‌ ಕೌನ್ಸಿಲ್ ಸದಸ್ಯ ಹಾಗೂ ನೈಋತ್ಯ ವಿಭಾಗದ ಕೋಆರ್ಡಿನೇಟರ್ ಜಿ.ಎಸ್. ಅಂಗಡಿ ಮಾತನಾಡಿ, ಮುಂಬರುವ ಯುವಕರಿಗೆ ಬಹಳಷ್ಟು ವೇದಿಕೆಗಳಿವೆ. ಕೌಶಲ, ವ್ಯವಹಾರ ಮತ್ತು ತಂತ್ರಜ್ಞಾನದ ಅರಿವು ಇದ್ದರೆ ತಮ್ಮ ವ್ಯಾಪ್ತಿಯಲ್ಲಿ ಚಾಕಚಕ್ಯತೆಯಿಂದ ಕೆಲಸ ಮಾಡಬಹುದು. ಇಂಥವರಿಗೆ ಈಗ ಬಹಳಷ್ಟು ಅವಕಾಶಗಳಿವೆ ಎಂದರು.

ಹುಬ್ಬಳ್ಳಿ ಶಾಖೆ ಚೇರ್ಮನ್ ಎಚ್.ಎಂ. ಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿರ್ಗಮಿತ ಚೇರ್ಮನ್ ಎಂ.ಆರ್. ಚಾಕಲಬ್ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೈಸ್ ಚೇರ್ಮನ್‌ಗಳಾದ ಎಂ.ಎಂ. ಜಾಲವಾಡಿ, ಎಸ್.ಎಸ್. ಹಿರೇಮಠ, ಖಜಾಂಚಿ ಎಂ.ಎಫ್. ಜುಂಜಣ್ಣವರ, ಕಾರ್ಯದರ್ಶಿ ರಾಜು ಗೌಡ, ಇತರರು ಇದ್ದರು. ಅಶೋಕ ಜೋಶಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net