ಒಬ್ಬರಿಗೆ ಒಂದು ಮನೆಗೆ ಮಾತ್ರ ಹಕ್ಕುಪತ್ರ

3Kgfph-1
Published on

ಕೆಜಿಎ್; ಚಿನ್ನದ ಗಣಿಗಳನ್ನು ಮುಚ್ಚುವಾಗ ಗಣಿ ಆಡಳಿತ ಮಂಡಳಿ ಮತ್ತು ಗಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರ ನಡುವೆ ಮನೆಗಳಿಗೆ ಸಂಬಂಧಿಸಿದ ಒಪ್ಪಂದದ ಪ್ರಕಾರ ಒಬ್ಬರಿಗೆ ಒಂದು ಮನೆ ನೀಡಲು ಅವಕಾಶ ಇದೆ ಎಂದು ಸಂಸದ ಎಂ.ಮಲ್ಲೇಶ್​ಬಾಬು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೇವ್​ ಕೆಜಿಎಫ್​ ಯುನೈಟೆಡ್​ ಫ್ರಂಟ್​ ವತಿಯಿಂದ ಹಮ್ಮಿಕೊಂಡಿದ್ದ ಸೇವ್​ ಕೆಜಿಎ್​ ಸಭೆಯಲ್ಲಿ ಮಾತನಾಡಿ, 2001ರಲ್ಲಿ ಚಿನ್ನದ ಗಣಿ ಮುಚ್ಚುವಾಗ ಮಾಡಿಕೊಂಡಿರುವ ಒಪ್ಪಂದದಂತೆ ಒಬ್ಬರಿಗೆ ಒಂದು ಮನೆಯ ಹಕ್ಕುಪತ್ರ ನೀಡಲು ಯಾವುದೇ ಅಡ್ಡಿಯಿಲ್ಲ. ಆದರೆ, ಇಂದಿಗೂ ಕೆಲ ನೌಕರರು ತಮ್ಮ ಹೆಸರಿನಲ್ಲಿ ಎರಡು ಮತ್ತು ಮೂರು ಮನೆಗಳನ್ನು ಹೊಂದಿರುವುದರಿಂದಲೇ ಎಲ್ಲರಿಗೂ ಹಕ್ಕುಪತ್ರಗಳನ್ನು ನೀಡುವುದು ತಡವಾಗುತ್ತಿದೆ ಎಂದರು.

ಎಸ್​ಟಿಬಿಪಿ ಯೋಜನೆಯಡಿಯಲ್ಲಿ ಒಂದು ಮನೆಗಿಂತ ಹೆಚ್ಚಿನ ಮನೆಗಳನ್ನು ಹೊಂದಿರುವವರು ಒಂದು ಮನೆಯನ್ನು ಮಾತ್ರ ಇರಿಸಿಕೊಂಡು ಉಳಿದ ಮನೆಗಳನ್ನು ಹಿಂದಿರುಗಿಸುವಂತೆ ಈಗಾಗಲೇ ಬಿಜಿಎಂಎಲ್​ ವತಿಯಿಂದ ನೋಟಿಸ್​ ನೀಡಲಾಗಿದೆ. ಅದರಂತೆ ಹಿಂತಿರುಗಿಸಿದಲ್ಲಿ ಮಾತ್ರ ಆದಷ್ಟು ಬೇಗನೇ ಉಳಿದವರಿಗೆ ಮನೆಯ ಹಕ್ಕುಪತ್ರ ವಿತರಿಸುವ ಕೆಲಸ ಮಾಡಲಾಗುವುದು ಎಂದರು.

ನಗರದ ಜಿಮ್ಖಾನ ಮೈದಾನದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಯುವಕರು ಮಾದಕ ವಸ್ತುಗಳ ದಾಸರಾಗಿ ಅನೈತಿಕ ಚಟುವಟಿಕೆ ನಡೆಸುವ ತಾಣವನ್ನಾಗಿಸಿಕೊಂಡಿರುವ ಕುರಿತಂತೆ ಮಾಹಿತಿ ಇದೆ. ಆ ಜಾಗವನ್ನು ನವೀಕರಣಗೊಳಿಸಲು ಮನವಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಎಸ್​ಒ ಅವರೊಂದಿಗೆ ಚರ್ಚಿಸಲಾಗಿದೆ. ಸಕಾರಾತ್ಮಕವಾಗಿ ಸ್ಪಂದನೆ ದೊರೆತಿದೆ ಎಂದರು.

ಬಿಇಎಂಎಲ್​ ಸಂಸ್ಥೆಯ ಗುತ್ತಿಗೆ ಕಾರ್ಮಿಕರು ಅರ್ನಿದಿಷ್ಟಾವಧಿ ಮುಷ್ಕರ ಕೈಗೊಂಡ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರನ್ನು ಸ್ಥಳಕ್ಕೆ ಕರೆಯಿಸಿ ನೌಕರರ ಮನವೊಲಿಸುವ ಕಾರ್ಯ ಮಾಡಿದರೂ ಸಹ ಕೇವಲ ಒಬ್ಬ ನೌಕರರೂ ತಮ್ಮನ್ನು ಭೇಟಿಯಾಗುವ ಕಾರ್ಯ ಮಾಡಲಿಲ್ಲ. ನೌಕರರಿಗೆ ತಾಳ್ಮೆ ಅಗತ್ಯ. ತಾಳ್ಮೆಯಿಂದ ಇದ್ದಲ್ಲಿ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಸೇವ್​ ಕೆಜಿಎಫ್​ನ ಅಧ್ಯಕ್ಷ ಜ್ಯೋತಿ ಬಸು ಮಾತನಾಡಿ, ಬೆಮೆಲ್​ ಸಂಸ್ಥೆಯಲ್ಲಿ ಖಾಲಿ ಇರುವ ನೌಕರರ ಹುದ್ದೆಗಳ ಭರ್ತಿ ವೇಳೆ ಸ್ಥಳಿಯರಿಗೆ ಅವಕಾಶ ನೀಡಬೇಕು. ಕೆಜಿಎಫ್​ ತಾಲೂಕಿನ ಒಂದು ಲಕ್ಷ ಸಹಿ ಸಂಗ್ರಹಣೆ ಮಾಡಿ ಕೆಜಿಎಫ್​ನ ಸಾರ್ವಜನಿಕ ಆಸ್ಪತ್ರೆಗೆ ಕಾಯಕಲ್ಪ ನೀಡಬೇಕು. ಕೆಜಿಎಫ್​ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡದೆ ಕೋಲಾರ ಮತ್ತು ಬೆಂಗಳೂರಿಗೆ ಶಿಫಾರಸು ಮಾಡುತ್ತಿದ್ದು, ಇದರಿಂದ ಬಹುತೇಕ ರೋಗಿಗಳು ಮಾರ್ಗ ಮಧ್ಯದಲ್ಲಿ ಮೃತಪಡುತ್ತಾರೆ. ಈ ಸಾವು& ನೋವು ತಪ್ಪಿಸಲು ಕೆಜಿಎಫ್​ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರು ಮತ್ತು ದಾದಿಯರನ್ನು ನೇಮಕ ಮಾಡಬೇಕೆಂದು ಮನವಿ ಮಾಡಿದರು.

ಬಾಕಿ <5 ಕೋಟಿ ಬಿಡುಗಡೆಗೊಳಿಸಲಿ

ಬಿಜಿಎಂಎಲ್​ನ ಆಸ್ಪತ್ರೆಯನ್ನು ಪ್ರಾರಂಭಿಸಿ ಚಿನ್ನದ ಗಣಿಗಳ ಕಾರ್ಮಿಕರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಬೇಕು. ಚಿನ್ನದ ಗಣಿಗಳ ಪ್ರದೇಶದಲ್ಲಿ 10 ಸಾವಿರ ನಿವೃತ್ತ ಕಾರ್ಮಿಕರ ಮನೆಗಳನ್ನು ಸ್ವಂತಕ್ಕೆ ನೀಡಬೇಕು. ಬಿಜಿಎಂಎಲ್​ ನಿವೃತ್ತ ನೌಕರರ 52 ಕೋಟಿ ರೂ. ಬಾಕಿ ಹಣ ನೀಡಬೇಕು. ಸೇವ್​ ಕೆಜಿಎಫ್​ನ ಅಧ್ಯಕ್ಷ ಜ್ಯೋತಿ ಬಸು ತಿಳಿಸಿದರು. ಗಣಿ ಪ್ರದೇಶದಲ್ಲಿ ಎರಡು ಪ್ರಮುಖ ಆಟದ ಮೈದಾನಗಳಾದ ಜಮ್ಖಾನ ಮೈದಾನ, ಡಾ.ಅಂಬೇಡ್ಕರ್​ ುಟ್​ಬಾಲ್​ ಮೈದಾನವನ್ನು ಪ್ರಾರಂಭಿಸಬೇಕು, ಇದರಿಂದ ನಗರದ ಯುವ ಸಮೂಹಕ್ಕೆ ಕ್ರೀಡಾ ಚಟುವಟಿಕೆಗಳಿಗೆ ಉಪಯೋಗವಾಗಲಿದೆ ಎಂದರು.

ಜಾಗ ಸಿಕ್ಕರೆ ಶ್ರೀ ಆಸ್ಪತ್ರೆ

ಬಿಜಿಎಂಎಲ್​ ಆಸ್ಪತ್ರೆ ಪುನರ್​ ಆರಂಭಿಸುವ ಸಂಬಂಧ ಈಗಾಗಲೇ ಸತ್ಯಸಾಯಿ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ, ಬಿಜಿಎಂಎಲ್​ ಆಸ್ಪತ್ರೆ ಜಾಗದ ವಿಚಾರವಾಗಿ ಪ್ರಸ್ತುತ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಅದು ಮುಗಿದ ಬಳಿಕವಷ್ಟೇ ಸತ್ಯಸಾಯಿ ಸಂಸ್ಥೆಯವರು ಆಸ್ಪತ್ರೆಯನ್ನು ನಡೆಸಿಕೊಂಡು ಹೋಗಲಿದ್ದಾರೆ ಎಂದು ಸಂಸದ ಮಲ್ಲೇಶ್​ಬಾಬು ತಿಳಿಸಿದರು.

3 ಕೆಜಿಎಫ್​ಪಿ-1

ಕೆಜಿಎ್​ನ ಪ್ರವಾಸಿ ಮಂದಿರದಲ್ಲಿ ಸೇವ್​ ಕೆಜಿಎಫ್​ ಯುನೈಟೆಡ್​ ಫ್ರಂಟ್​ ವತಿಯಿಂದ ಹಮ್ಮಿಕೊಂಡಿದ್ದ ಸೇವ್​ ಕೆಜಿಎಫ್​ನ ಸಭೆಯಲ್ಲಿ ಸಂಸದ ಮಲ್ಲೇಶ್​ಬಾಬು ಮಾತನಾಡಿದರು. ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​, ನಟರಾಜ್​, ತಾಲೂಕು ಅಧ್ಯಕ್ಷ ದಯಾನಂದ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net