ವಿದ್ಯೆಯೊಂದೇ ಕೊನೆಯವರೆಗೂ ಜತೆಗಿರುತ್ತದೆ

NVL GURU VANDANE
Published on

ನವಲಗುಂದ: ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯುದಿಲ್ಲ. ಆದರೆ, ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ ಎಂದು ಶಲವಡಿಯ ಗುರುಶಾಂತೇಶ್ವರ ಮಠದ ಅಭಿನವ ಗುರುಶಾಂತೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಶಲವಡಿ ಗ್ರಾಮದ ಗುರುಶಾಂತೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ 1965ರಿಂದ 1980ರ ಅವಧಿಯಲ್ಲಿ ಕಲಿತ ವಿದ್ಯಾರ್ಥಿಗಳಿಂದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನಿವೃತ್ತ ಶಿಕ್ಷಕ ಎಸ್.ವೈ. ಕೊಪ್ಪದ ಮಾತನಾಡಿದರು. ಐಎಎಸ್ ಅಧಿಕಾರಿ ಶಿವಾನಂದ ಕಲಕೇರಿ ಅವರು ತಾಯಿ ಸ್ಮರಣಾರ್ಥ ಶಾಲೆಯ ಅಭಿವೃದ್ಧಿಗೆ 5 ಲಕ್ಷ ರೂ.ಗಳ ಚೆಕ್ ಅನ್ನು ಮುಖ್ಯಾಧ್ಯಾಪಕ ಎನ್.ವಿ. ಕುರವತ್ತಿಮಠ ಅವರಿಗೆ ಹಸ್ತಾಂತರಿಸಿದರು. ಶಿಕ್ಷಕರಾದ ಬಿ.ಬಿ. ಹಾಲವರ, ಜಿ.ಡಿ. ಪಾಟೀಲ ಹಾಗೂ ಬಿ.ಎಚ್. ಗಾಣಿಗೇರ, ಅಂದಿನ ದಿನಗಳಲ್ಲಿ ಶಿಕ್ಷಣ ಹಾಗೂ ಕಠಿಣ ಪರಿಶ್ರಮ ಕುರಿತು ಮೆಲುಕು ಹಾಕಿದರು. ಡಾ. ಸಂಗಮೇಶ ಕಲಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು

ಡಾ.ಮೋಹನ ಕಲಹಾಳ, ಬಸವರಾಜ ಹೊರಕೇರಿ, ಪ್ರೇಮಾ ಲಾಂಡೆ, ಪುಷ್ಪರಾಜ ಶೆಡಜಿ, ಮಹೇಶಗೌಡ ಪಾಟೀಲ, ಎಸ್.ವಿ. ಕಟಗಿ ಅನಿಸಿಕೆ ವ್ಯಕ್ತಪಡಿಸಿದರು. ಜಿಪಂ ಮಾಜಿ ಸದಸ್ಯ ಪಾರ್ವತೆಮ್ಮ ನಾಗಠಾಣ, ವೀರಬಸಪ್ಪ ಮುಳಗುಂದ, ಶಾಂತೇಶ ನೀರಲಗಿ, ಶಾಂತಪ್ಪ ಹೊನ್ನೂರು, ಶಾಂತಕ್ಕ ಗಡಾದ, ರತ್ನವ್ವ ಅತ್ಯಪ್ಪನಮಠ, ಇತರರಿದ್ದರು. ಮಲ್ಲಣ್ಣ ನಡುವಿಹಳ್ಳಿ, ವಿ.ವಿ. ಯಲಿಗಾರ, ಡಾ. ಎಂ.ಐ. ಮನ್ವಾಚಾರಿ ಹಾಗೂ ಗುರುಸಿದ್ದಪ್ಪ ಹೊಸಕೇರಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net