ಪ್ರಕೃತಿ ಉಳಿದರೆ ಮಾತ್ರ ಮಾನವನಿಗೆ ಉಳಿಗಾಲ

7katakol1111
Published on

ಕಟಕೋಳ: ಪರಿಸರ ಉಳಿದರೆ ಮಾತ್ರ ಮಾನವ ಬದುಕಬಲ್ಲ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ರಾಮದುರ್ಗದ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ದಾನಮ್ಮ ಗುಂಜಗಾವಿ ಹೇಳಿದರು.

ಸಮೀಪದ ಚಂದರಗಿಯ ಎಸ್.ಎಂ. ಕಲೂತಿ ಸಂಯುಕ್ತ ಕ್ರೀಡಾ ವಸತಿ ಮಹಾವಿದ್ಯಾಲಯದಲ್ಲಿ 26 ಎನ್‌ಸಿಸಿ ಕರ್ನಾಟಕ ಬಟಾಲಿಯನ್ ವತಿಯಿಂದ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಲಹಳ್ಳಿಯ ಪರವೀನ್ ಅಕ್ತಾರ, ರಾಮದುರ್ಗ ಹಾಗೂ ಗೊಡಚಿಯ ಬೀಟ್ ಆಫೀಸರ್ ಆನಂದ ಹನಸಿ, ಮಹೇಶ ಕಿಲಾರಿ, ಅರಣ್ಯ ನಿರೀಕ್ಷಕ ಡಿ.ಎಚ್. ಪಾಟೀಲ, ಸ್ಪೋಕೋ ಸಂಸ್ಥೆಯ ವ್ಯವಸ್ಥಾಪಕ ಮತ್ತು ಎನ್‌ಸಿಸಿ ಆಫೀಸರ್ ಜೆ.ಬಿ.ಮೇಟಿ, ಪ್ರಾಚಾರ್ಯ ಸತೀಶ ಪಾಟೀಲ, ಮುಖ್ಯ ತರಬೇತುದಾರ ಜಿ.ಕೆ. ಅಪ್ಪಿನಬೈಲ, ಕೆ.ವಿ. ಪಮ್ಮಾರ, ಎಂ.ಎ. ಇನಾಮದಾರ ಇತರರು ಇದ್ದರು. ಶಿಕ್ಷಕ ಶಿವಾನಂದ ತಿಗಡಿ ನಿರೂಪಿಸಿದರು. ಶಂಕರ ಉಮಚಗಿ ಸ್ವಾಗತಿಸಿದರು. ಚೆನ್ನಮ್ಮ ಕಾಜಗಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net