

ರಾಯಬಾಗ: ರೈತರ ಮತ್ತು ಗ್ರಾಹಕರ ಸಹಕಾರದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಇದಕ್ಕೆ ನಿದರ್ಶನ ಎಂಬಂತೆ ಟ್ರ್ಯಾಕ್ಟರ್ ಮಾರಾಟದಲ್ಲಿ ಹಿರೇಮಠ ಟ್ರ್ಯಾಕ್ಟರ್ಸ್ ತೋರಿಸಿಕೊಟ್ಟಿದೆ ಎಂದು ಬೆಂಗಳೂರಿನ ಐಷರ್ ಟ್ರ್ಯಾಕ್ಟರ್ಸ್ ಅಸೋಸಿಯೇಟ್ ಉಪಾಧ್ಯಕ್ಷ ಸೋಮಶೇಖರ ಹೇಳಿದರು.
ಪಟ್ಟಣದ ಮಹಾವೀರ ಭವನದ ಆವರಣದಲ್ಲಿ ಹಿರೇಮಠ ಟ್ರ್ಯಾಕ್ಟರ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಐಷರ್ ಟ್ರ್ಯಾಕ್ಟರ್ಸ್ ಗ್ರಾಹಕರ ಮೇಳ ಹಾಗೂ 101 ಐಷರ್ ಟ್ರ್ಯಾಕ್ಟರ್ಸ್ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರೇಮಠ ಟ್ರ್ಯಾಕ್ಟರ್ಸ್ ಮಾಲೀಕ ರಾಜಶೇಖರ ಹಿರೇಮಠ ಮಾತನಾಡಿ, ರೈತರ ಸಹಕಾರ ಮತ್ತು ಬೆಂಬಲದಿಂದ ಇಂದು 101 ಟ್ರ್ಯಾಕ್ಟರ್ ರೈತರಿಗೆ ಹಸ್ತಾಂತರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ 412 ಟ್ರ್ಯಾಕ್ಟರ್ ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಭೂಪಾಲ ಹೆಡ್ ಮಾರ್ಕೆಟಿಂಗ್ ಬಿ.ಕೆ.ಪುನೀತ ಕುರಂಬಯ್ಯ, ವಿಶ್ವೇಶ್ ಎಂ.ಎಸ್., ಜಿ.ಮೂರ್ತಿ, ಶಂಕರ ಅರನಾಡಿ, ಪ್ರವೀಣ ಕುಮಾರ ಎಂ.ಪಿ, ಅಜಯ ರಾಮದುರ್ಗ, ದೀಪಕ ಗಾಯಕವಾಡ, ಸಂಜಯ ಹಿರೇಮಠ ಇತರರಿದ್ದರು.