ಸಂವಿಧಾನದಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯ

Only constitution can eradicate poverty
ಜಮಖಂಡಿ ನಗರದ ಎಸ್‌ಆರ್‌ಎ ಕ್ಲಬ್‌ನಲ್ಲಿ ನಡೆದ ಬಿಎಸ್‌ಪಿ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಹ.ರಾ.ಮಹೇಶ ಅವರನ್ನು ಸನ್ಮಾನಿಸಲಾಯಿತು. ಯಮನಪ್ಪ ಗುಣದಾಳ, ಎಂ. ಬಿ. ಸಿದಗೋಣಿ, ಕಸ್ತೂರಿ ನೂಲಿ, ಯಲ್ಲಪ್ಪ ಸನಕ್ಯಾನವರ ಮತ್ತಿತರರಿದ್ದಾರೆ.
Published on

ಜಮಖಂಡಿ : ಯಾವ ದೇವರು ನಿಮ್ಮ ಬಡತನವನ್ನು ನಿವಾರಣೆ ಮಾಡುವುದಿಲ್ಲ. ಪೂರ್ಣ ಪ್ರಮಾಣದಲ್ಲಿ ಸಂವಿಧಾನ ಜಾರಿಯಾದರೆ ಮಾತ್ರ ಬಡತನ ನಿವಾರಣೆಯಾಗಲು ಸಾಧ್ಯವಾಗುತ್ತದೆ ಎಂದು ಬಿಎಸ್‌ಪಿ ರಾಜ್ಯ ಉಸ್ತುವಾರಿ ಹ.ರಾ.ಮಹೇಶ ಹೇಳಿದರು.

ನಗರದ ಎಸ್‌ಆರ್‌ಎ ಕ್ಲಬ್ ಸಭಾಭವನದಲ್ಲಿ ಜಮಖಂಡಿ ವಿಧಾನಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಸಂಪತ್ತಿನ ಸಮಾನ ಹಂಚಿಕೆಗೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಕಾನೂನು ಮಾಡಿದರು. ಆದರೆ, ದೇಶ ಆಳುತ್ತಿರುವ ಬಿಜೆಪಿ, ಕಾಂಗ್ರೆಸ್, ದಳಗಳು ಸಂವಿಧಾನವನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡದೆ ಇವತ್ತಿಗೂ ನಮ್ಮ ಜನರು ಬಡತನದಲ್ಲಿರಲು ಕಾರಣವಾಗಿವೆ ಎಂದರು.

ದಲಿತ ಮುಖಂಡ ಯಮನಪ್ಪ ಗುಣದಾಳ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಬಹುಜನರ ಪಕ್ಷ ಬಹುಜನ ಸಮಾಜ ಪಕ್ಷ ಈ ದೇಶದಲ್ಲಿ ಅಧಿಕಾರಕ್ಕೆ ಬರಬೇಕು. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಆನೆ ಗುರುತಿಗೆ ಮತ ಹಾಕುವುದರ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರ ಋಣ ತೀರಿಸಬೇಕು ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಬಿ. ಸಿದಗೋಣಿ, ನಿವೃತ್ತ ಶಿಕ್ಷಕಿ ಕಸ್ತೂರಿ ನೂಲಿ, ಕಾರ್ಯದರ್ಶಿ ಯಲ್ಲಪ್ಪ ಸನಕ್ಯಾನವರ ಮಾತನಾಡಿದರು.

ತಾಲೂಕು ಅಧ್ಯಕ್ಷ ಶಿವಾನಂದ ಬಬಲೇಶ್ವರ, ಸುನೀಲ ಬಳೋಲಗಿಡದ, ಮಲ್ಲೇಶ ಮೀಶಿ, ಸಂಗು ಶಿವನಕ್ಕನವರ, ಯಾಸೀನ ಬನ್ನು, ಮಹಾದೇವ ಕಾಂಬಳೆ, ಮಹ್ಮದ್‌ಅಲಿ ರಾಮದುರ್ಗ, ಉದಯ ನಾಗನೂರ, ಸಿದ್ದು ಕಾಂಬಳೆ, ರಾಮು ಪೂಜಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net