ಮಾವತ್ತೂರು ಕೆರೆ ತುಂಬಲು ಕೆಲವೇ ಅಡಿ ಬಾಕಿ

2
Published on

ವಿಜಯವಾಣಿ ಸುದ್ದಿಜಾಲ ಕೊರಟಗೆರೆ

ಕಳೆದ ಎರಡು ವಾರಗಳಿಂದ ತಾಲೂಕಿನಲ್ಲಿ ಸತತ ಮಳೆಯಾಗುತ್ತಿರುವುದರಿಂದ ಬಹುತೇಕ ಕೆರೆಗಳು ತುಂಬಿದ್ದು, ಹಳ್ಳ& ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ತಾಲೂಕಿನ ತೀತಾ ಜಲಾಶಯ, ತುಂಬಾಡಿ ದೊಡ್ಡಕೆರೆ, ಜಂಪೇನಹಳ್ಳಿ ಕೆರೆ, ಗಂಗಾಧರೇಶ್ವರ ಕೆರೆ, ಹೊಸಕೆರೆ, ಇರಸಂದ್ರ ಕಾಲನಿ ಕೆರೆ ಸೇರಿದಂತೆ ಬಹುತೇಕ ಕೆರೆಗಳು ತುಂಬಿದ್ದು, ತಾಲೂಕಿನ ಬಹುದೊಡ್ಡ ಕೆರೆ ಎನ್ನಲಾದ ಮಾವತ್ತೂರು ಕೆರೆ ತುಂಬಲು ಕೆಲವೇ ಅಡಿ ಬಾಕಿ ಇದೆ. ತಾಲೂಕಿನಲ್ಲಿ ಜಯಮಂಗಲಿ, ಗರುಡಾಚಲ, ಸುವರ್ಣ ಮುಖಿ ನದಿಗಳು 3 ದಶಕಗಳ ನಂತರ ಕಳೆದ 15 ದಿನಗಳಿಂದ ಮೈದುಂಬಿ ಹರಿಯುತ್ತಿವೆ. ಇದರಿಂದ ನದಿಗಳು ಹಾದುಹೋಗುವ ಬಹುತೇಕ ರಸ್ತೆಗಳ ಸಂಚಾರಕ್ಕೆ ಬ್ರೇಕ್​ ಬಿದ್ದಿದ್ದು, ಜನರು ಸಂಚರಿಸಲು ಅನ್ಯಮಾರ್ಗ ಹುಡುಕುವ ಸ್ಥಿತಿ ನಿಮಾರ್ಣವಾಗಿದೆ.

2022 ಮಳೆಗಿಂತ ಹೆಚ್ಚಿನ ಮಳೆ: 2022ರಲ್ಲಿ ಬಿದ್ದ ಮಳೆಗೆ ತಾಲೂಕಿನ ಮಾವತ್ತೂರು ಕೆರೆ ಸೇರಿದಂತೆ ತೀತಾ ಜಲಾಶಯ, ತುಂಬಾಡಿ, ಚಿಕ್ಕಾವಳ್ಳಿ ಕೆರೆಗಳು ತಿಂಗಳಿಡೀ ಮೈದುಂಬಿ ಹರಿದಿದ್ದವು. ಕಳೆದ ವರ್ಷ ಕುಡಿಯುವ ನೀರಿಗೆ ತಾತ್ವರ ಉಂಟಾಗಿತ್ತು. ಆದರೆ, ಈ ಬಾರಿಯ ಮಳೆಯಿಂದ ಬಹುತೇಕ ರೈತರ ಬೋರ್​ವೆಲ್​ಗಳು ರೀಚಾರ್ಚ್​ ಆಗಿದೆ. ಮಳೆಯ ತೀವ್ರತೆಯಿಂದ ತುಂಬಾಡಿ ದೊಡ್ಡಕೆರೆ ಕೋಡಿ ಬಿದ್ದಿದ್ದು, ಹಳ್ಳದ ನೀರು ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಮಲ್ಲಪ್ಪನಹಳ್ಳಿ ಬಳಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ವಡ್ಡಗೆರೆ ಗ್ರಾಪಂ ರಸ್ತೆಗೆ ಓಡಾಟಕ್ಕೆ ರ್ನಿಬಂಧ ವಿಧಿಸಲಾಗಿದೆ.

ಮಲ್ಲಪ್ಪನಹಳ್ಳಿ ಕೆರೆಕೋಡಿ ಬಿದ್ದ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ವಾಹನ ಸಂಚಾರ ಮಾಡದಂತೆ ರ್ನಿಬಂದ ಹೇರಲಾಗಿದೆ. ತಾಪಂ ಇಒ ಜತೆ ಚರ್ಚಿಸಲಾಗಿದ್ದು, ಶ್ರೀವೇ ಸರ್ಕಾರಕ್ಕೆ ಸೇತುವೆ ನಿಮಾರ್ಣಕ್ಕೆ ಪ್ರಸ್ತಾವನೆ ಸಲ್ಲಿಸಿ ಕ್ರಮಕೈಗೊಳ್ಳುತ್ತೇವೆ. | ಕೆ.ಮಂಜುನಾಥ್​ ತಹಸೀಲ್ದಾರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net