ಆನ್‌ಲೈನ್ ಟ್ರೇಡಿಂಗ್ ಹೂಡಿಕೆ 24.22 ಲಕ್ಷ ರೂ. ವಂಚನೆ

Fruad
Published on

ಮಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಲು ಹೋಗಿ ವ್ಯಕ್ತಿಯೊಬ್ಬರು 24.22 ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು ಮಾರ್ಚ್ ತಿಂಗಳಿನಲ್ಲಿ ಇನ್‌ಸ್ಟಾಗ್ರಾಂ ನೋಡುವಾಗ ಆನ್‌ಲೈನ್ ಟ್ರೇಡಿಂಗ್ ಕುರಿತ ಲಿಂಕ್ ಕಂಡು ಬಂದಿದೆ. ಅದನ್ನು ಕ್ಲಿಕ್ ಮಾಡಿದಾಗ ತೆರೆದುಕೊಂಡ ಗ್ರೂಪ್‌ನಲ್ಲಿ ಶರೋನ್ ತ್ರಿವೇದಿ ಎನ್ನುವ ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದು, ಆತ ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದಾನೆ. ತನ್ನ ವಾಟ್ಸಾಸ್ ಸಂಖ್ಯೆಯ ಮೂಲಕ ಆತ ನಿರಂತವಾಗಿ ಸಂಪರ್ಕದಲ್ಲಿದ್ದ. ಫೈರಯ್ಸ ಮಾರ್ಕೆಟ್ ಮತ್ತು ಝೆರೋದಾ ಎಂಬ ಟ್ರೇಡಿಂಗ್ ಕಂಪೆನಿಯಲ್ಲಿ ಹೂಡಿಕೆ ಮಾಡಲು ತಿಳಿಸಿದ್ದಾನೆ.

ಅದರಂತೆ ಎ.21ರಿಂದ ಮೇ 31ರ ವರೆಗೆ ದೂರುದಾರರು ಆತ ಹೇಳಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 24,22,077 ರೂ. ಪಾವತಿ ಮಾಡಿದ್ದಾರೆ. ಅನಂತರದ ದಿನಗಳಲ್ಲಿ ಸ್ವಲ್ಪ ಹಣವನ್ನು ಹಿಂತಿರುಗಿಸಿದ್ದ. ಇನ್ನುಳಿದ ಹಣವನ್ನು ನೀಡುವಂತೆ ಕೇಳಿದಾಗ ಟ್ಯಾಕ್ಸ್ ಹಣ ಹಾಗೂ ಕಮಿಷನ್ ಹಣವನ್ನು ಕಟ್ಟುವಂತೆ ಕೇಳಿದ್ದು, ಈ ಬಗ್ಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಮೋಸ ಹೋಗಿರುವುದು ಅರಿವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net