

ಕಾರವಾರ: ವಿದ್ಯಾರ್ಥಿಗಳಿಗೆ ಬುದ್ದಿ ಹೇಳಬೇಕಾದ ಪ್ರಾಧ್ಯಾಪಕರೇ ಆನ್‌ಲೈನ್ ವಂಚನೆಗೆ ಒಳಗಾದ ಘಟನೆ ನಡೆದಿದೆ. ಆನ್‌ಲೈನ್ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಮಾಡಲು ಹೋಗಿ ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಪ್ರಾಧ್ಯಾಪಕರೊಬ್ಬರು 89.44 ಲಕ್ಷ ರೂ. ಕಳೆದುಕೊಂಡಿದ್ದಾರೆ. ವಾಟ್ಸ್ಆ್ಯಪ್ ಗ್ರೂಪ್ ಒಂದರಲ್ಲಿ ಬಂದ ಸಂದೇಶವೊಂದನ್ನು ನಂಬಿ ಅಲ್ಲಿ ತಿಳಿಸಿದ ಲಿಂಕ್ ಓಪನ್ ಮಾಡಿ ಹಣ ಹೂಡಿಕೆ ಮಾಡುತ್ತ ಹೋಗಿದ್ದಾರೆ. ಮೊದಲು ಶೇ.6 ರಷ್ಟು ಲಾಂಭಾAಶ ದೊರಕುತ್ತಿತ್ತು. ಹೆಚ್ಚಿನ ಹಣ ಹೂಡಿಕೆ ಮಾಡಿದಲ್ಲಿ 3 ರಿಂದ 4 ಪಟ್ಟು ಹಣ ದೊರಕುವ ಆಸೆಯನ್ನು ಗ್ರೂಪ್ ಅಡ್ಮಿನ್ ನೀಡಿದ್ದರು. ಅದನ್ನು ನಂಬಿ ಮೊದಲು 13 ಸಾವಿರ ನಂತರ 76 ಸಾವಿರ ಹೀಗೆ ಹಂತ ಹಂತವಾಗಿ ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಒಟ್ಟಾರೆ ಹಣ ಮತ್ತು ಕಮೀಷನ್ ನೀಡದೇ ಒಟ್ಟು 89.44 ಲಕ್ಷ ರೂ. ಕಳೆದುಕೊಂಡಿರುವುದಾಗಿ ಅವರು ದೂರು ಸಲ್ಲಿಸಿದ್ದಾರೆ. ಕಾರವಾರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.