ಆನ್‌ಲೈನ್‌ ಷೇರಿನಲ್ಲಿ ಹಣ ಗಳಿಸುವಾಸೆಯಲ್ಲಿ 55 ಸಾವಿರ ಕಳೆದುಕೊಂಡ ಗುತ್ತಿಗೆದಾರ

Online share Market fraud
Published on

ಕಾರವಾರ: ಆನ್‌ಲೈನ್ ಮೂಲಕ ಷೇರಿನಲ್ಲಿ ಹಣ ತೊಡಗಿಸಿದ ವ್ಯಕ್ತಿ 55 ಸಾವಿರ ರೂ. ಕಳೆದುಕೊಂಡ ಘಟನೆ ಹೊನ್ನಾವರದಲ್ಲಿ ನಡೆದಿದ್ದು, ಕಾರವಾರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊನ್ನಾವರದ ಅಕ್ಷಯಕುಮಾರ ವಿಜಯ ನಾಯ್ಕ ಹಣ ಕಳೆದುಕೊಂಡಿದ್ದು, ದೂರು ನೀಡಿದ್ದಾರೆ. ಮೊಬೈಲ್‌ಗೆ ಬಂದ್ ಒಂದು ಸಂದೇಶದಿಂದ ಬಿಟ್‌ಪಿನೆಕ್ಸ್ ಎಂಬ ಆನ್‌ಲೈನ್ ಷೇರು ಮಾರುಕಟ್ಟೆಯಲ್ಲಿ ಮೊದಲು 100 ಹಣ ತೊಡಗಿಸಿದಾಗ ಅದಕ್ಕೆ 1,300 ರೂ. ಹಣ ಅವರಿಗೆ ಮರಳಿ ಬಂದಿತ್ತು.

ಅವರು ಜೂನ್ 21 ಹಾಗೂ 22 ರಂದು ಒಟ್ಟು 55 ಸಾವಿರ ರೂ. ತೊಡಗಿಸಿದ್ದರು. ಆದರೆ, ಇದುವರೆಗೂ ಹಣ ಮರಳಿ ಬಂದಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net