

ಕುಶಾಲನಗರ:
ಲಾಡ್ಜ್ನಲ್ಲಿ ಹೆಂಗಸರಿAದ ಮಸಾಜ್ ಮಾಡಿಸುವುದಾಗಿ ಹೇಳಿ ಆನ್‌ಲೈನ್‌ನಲ್ಲಿ ಹಣ ಪಡೆದು ವಂಚಿಸುತ್ತಿದ್ದ ಜಾಲವೊಂದನ್ನು ಬೇಧಿಸಿರುವ ಕುಶಾಲನಗರ ಪೊಲೀಸರು ಪ್ರಕರಣಕ್ಕೆ ಸಂಬAಧಿಸಿದAತೆ ಹಾಸನ ಜಿಲ್ಲೆಯ 8 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿAದ 2 ಕಾರು, 17 ಮೊಬೈಲ್, 1 ಟ್ಯಾಬ್, 1 ಲ್ಯಾಪ್‌ಟಾಪ್ ಹಾಗೂ 24,800 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಸುಳ್ಳಕ್ಕಿ ಗ್ರಾಮದ ಮಂಜನಾಥ, ಚಿಕ್ಕಸತ್ತಿಗಾಲ ಗ್ರಾಮದ ಸಂದೀಪ್ ಕುಮಾರ್.ಸಿ.ಎಸ್., ಇದೇ ಗ್ರಾಮದ ರಾಕೇಶ್ ಸಿ.ಬಿ., ಜಯಲಕ್ಷ್ಮೀ ಕೆ., ಬೇಲೂರು ತಾಲೂಕು ರಾಮನಗರ ಗ್ರಾಮದ ಸಹನಾ ಎಸ್., ಇದೇ ಗ್ರಾಮದ ಪಲ್ಲವಿ, ಸಕಲೇಶಪುರ ತಾಲೂಕು ಇರಗಲ್ ಗ್ರಾಮದ ಅಭಿಷೇಕ್ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಒರ್ವ ಅಪ್ರಾಪ್ತಳನ್ನು ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಲಾಡ್ಜ್ನಲ್ಲಿ ಹೆಂಗಸರಿAದ ಸೆಕ್ಸ್/ಮಸಾಜ್ ಮಾಡಿಸಲಾಗುವುದು ಮತ್ತು ಆನ್‌ಲೈನ್ ಮೂಲಕ ಮುಂಗಡವಾಗಿ ಹಣ ಕಳುಹಿಸಿದರೆ ಈಗಲೇ ಹೆಂಗಸರ ಏರ್ಪಾಡು ಮಾಡಲಾಗುವುದು ಎಂದು ಮೊಬೈಲ್‌ನಲ್ಲಿ ಇರುವ Locanto App ಮೂಲಕ Kushalnagar Top Model Sexy Aunties Service Available Kushalnagar- 23 0 5ಎನ್ನುವ ಸೈಟ್‌ನಲ್ಲಿ ಬಲೆ ಬೀಸಿ ಹಣ ಕೀಳುತ್ತಿದ್ದ ಬಗ್ಗೆ ಜೂ. 29ಕ್ಕೆ ದಾಖಲಾದ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಕುಶಾಲನಗರ ಟೌನ್ ಪೊಲೀಸರು ಈ ಜಾಲವನ್ನು ಹೆಡೆಮುರಿ ಕಟ್ಟಿದಾರೆ.
ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ಇನ್ಸ್ಪೆಕ್ಟರ್ ಪ್ರಕಾಶ್ ಬಿ.ಜಿ., ಪಿಎಸ್‌ಐ ಚಂದ್ರಶೇಖರ್ ಹೆಚ್.ವಿ., ಹೆಚ್.ಟಿ., ಗೀತಾ ಹಾಗೂ ಉಪ ವಿಭಾಗ ಮಟ್ಟದ ಅಪರಾಧ ಪತ್ತೆ ದಳದ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿಯ ವಿಶೇಷ ತಂಡವನ್ನು ರಚಿಸಿ ಆರೋಪಿಗಳನ್ನು ಜು.6ರಂದು ಬೆಂಗಳೂರಿನಲ್ಲಿ ಸೆರೆಹಿಡಿಯಲಾಗಿದೆ.
ಈ ಆರೋಪಿಗಳು ಬೇರೆ ಬೇರೆ ಊರುಗಳಲ್ಲಿ ಕರೆ ಮಾಡಿದ ವ್ಯಕ್ತಿಗಳ ಊರಿನಲ್ಲಿರುವ ಲಾಡ್ಜ್ ಹೆಸರು ಹೇಳಿ ಕೊಂಡು ಹಲವು ಜನರಿಗೆ ವಂಚಿಸಿ ರೂ. 3 ಲಕ್ಷ ರೂ.ಗೂ ಹೆಚ್ಚು ಹಣ ಪಡೆದಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಈ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವೈಖರಿಯನ್ನು ಎಸ್.ಪಿ. ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.
ಅಂತರ್ಜಾಲದಲ್ಲಿ ಮಹಿಳೆಯರಿಂದ ಸೆಕ್ಸ್, ಮಸಾಜ್, ವೇಶ್ಯಾವಾಟಿಕೆ ಸೇವೆಗಳು ಲಭ್ಯ
ಎಂಬುದಾಗಿ ಮೊಬೈಲ್ ಸಂಖ್ಯೆ ನೀಡಿ ಕರೆ ಮಾಡುವಂತೆ ಸೃಷ್ಟಿಸಿರುವ ವೆಬ್‌ಸೈಟ್ ಬಳಸಿ ನಡೆಸುವ ವಂಚನೆಗೆ ಸಾರ್ವಜನಿಕರು ಒಳಗಾಗಬಾರದು. ಹೋಮ್‌ಸ್ಟೇ, ರೆಸಾರ್ಟ್, ಲಾಡ್ಜ್ಗಳಲ್ಲಿ ಸಮಾಜದ ಸ್ವಾಸ್ಥ್ಯ ಹದಗೆಡುವ ಯಾವುದೇ ರೀತಿಯ ಅನೈತಿಕ ಅಕ್ರಮ ಚಟುವಟಿಕೆಗಳು ನಡೆಸುತ್ತಿರುವುದು ಕಂಡುಬAದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡಿ ಮಾಹಿತಿ ನೀಡಬಹುದು.
ಕೆ. ರಾಮರಾಜನ್, ಕೊಡಗು ಎಸ್‌ಪಿ