ಈಶಾ ರುದ್ರಾಕ್ಷ ದೀಕ್ಷೆಗಾಗಿ ಆನ್​ಲೈನ್ ನೋಂದಣಿ ಆರಂಭ..

Isha F
Published on

ಬೆಂಗಳೂರು: ಮಹಾಶಿವರಾತ್ರಿಯ ಮಂಗಳಕರ ರಾತ್ರಿಯಂದು ಸದ್ಗುರುಗಳಿಂದ ಚೈತನ್ಯೀಕರಿಸಲ್ಪಟ್ಟ ರುದ್ರಾಕ್ಷವನ್ನು ಭಕ್ತರಿಗೆ ನೀಡಲು ಈಶಾ ರುದ್ರಾಕ್ಷ ದೀಕ್ಷೆಗಾಗಿ ನೋಂದಣಿಯನ್ನು ಪ್ರಾರಂಭಿಸಲಾಗಿದೆ. ರುದ್ರಾಕ್ಷವು ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಬೆಂಬಲಿಸುತ್ತದೆ, ಪ್ರಭಾವಲಯವನ್ನು ಶುದ್ಧೀಕರಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳ ವಿರುದ್ಧ ರಕ್ಷಣೆ ನೀಡುತ್ತದೆ. ಇದು ಧ್ಯಾನದಲ್ಲಿ ಸಹಾಯ ಮಾಡುತ್ತದೆ ಮತ್ತು ಗೃಹಸ್ಥರು ಸೇರಿದಂತೆ ಯಾರಾದರೂ ಧರಿಸಬಹುದು.

ದೀಕ್ಷೆಗೆ ನೋಂದಾಯಿಸಿದ ನಂತರ, ಭಕ್ತರು ಧ್ಯಾನಲಿಂಗದ ಸನ್ನಿಧಿಯಲ್ಲಿ ಚೈತನ್ಯೀಕರಿಸಲ್ಪಟ್ಟ ಪವಿತ್ರವಾದ ಈಶಾ ವಿಭೂತಿಯೊಂದಿಗೆ ರುದ್ರಾಕ್ಷವನ್ನು ಸ್ವೀಕರಿಸುತ್ತಾರೆ. ಅವರು ಅಭಯ ಸೂತ್ರವನ್ನು ಸಹ ಸ್ವೀಕರಿಸುತ್ತಾರೆ - ಇದು ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಬೆಂಬಲಿಸುವ ಮತ್ತು ಭಯವನ್ನು ತೆಗೆದುಹಾಕಲು ವಿಶೇಷವಾಗಿ ಚೈತನ್ಯೀಕರಿಸಲ್ಪಟ್ಟ ಪವಿತ್ರವಾದ ದಾರವಾಗಿದೆ. ರುದ್ರಾಕ್ಷ ದೀಕ್ಷಾ ಪ್ಯಾಕೇಜ್ ಆದಿಯೋಗಿಯ ಛಾಯಾಚಿತ್ರವನ್ನು ಸಹ ಒಳಗೊಂಡಿದೆ. ಆದಿಯೋಗಿಯ 112 ಅಡಿ ಎತ್ತರದ ಶಿಲ್ಪವು ಯೋಗಕ್ಷೇಮವನ್ನು ಸಾಧಿಸಲು ಮತ್ತು ಒಬ್ಬರ ಪರಮ ಸ್ವರೂಪವನ್ನು ಅರಿಯಲು ಅವರು ನೀಡಿದ 112 ಮಾರ್ಗಗಳನ್ನು ಪ್ರತಿನಿಧಿಸುತ್ತದೆ.

ರುದ್ರಾಕ್ಷಗಳು ಶಿವನ ಆನಂದಭಾಷ್ಪದ ಹನಿಗಳು. ರುದ್ರಾಕ್ಷದ ದಂತಕಥೆಯ ಪ್ರಕಾರ, ಶಿವನು ದೀರ್ಘಕಾಲ ಧ್ಯಾನಕ್ಕೆ ಕುಳಿತನು. ಅವನ ಭಾವಪರವಶತೆಯು ಅವನನ್ನು ಸಂಪೂರ್ಣವಾಗಿ ನಿಶ್ಚಲನನ್ನಾಗಿ ಮಾಡಿತು. ಅವನು ಉಸಿರಾಡುತ್ತಿರುವಂತೆಯೂ ಕಾಣಿಸಲಿಲ್ಲ ಮತ್ತು ಅವನು ಮರಣಿಸಿದನೆಂದು ಎಲ್ಲರೂ ಭಾವಿಸಿದರು. ಜೀವದ ಒಂದೇ ಒಂದು ಗುರುತು ಗೋಚರಿಸಿತು – ಅದು ಅವನ ಕಣ್ಣುಗಳಿಂದ ಜಿನುಗುವ ಭಾವಪರವಶತೆಯ ಕಣ್ಣೀರು. ಈ ಕಣ್ಣೀರಿನ ಹನಿಗಳು ಭೂಮಿಯ ಮೇಲೆ ಬಿದ್ದವು ಮತ್ತು "ಶಿವನ ಆನಂದಭಾಷ್ಪ" ರುದ್ರಾಕ್ಷವಾಯಿತು.

2021 ರಲ್ಲಿ, ಈಶಾ 3.5 ದಶಲಕ್ಷ ರುದ್ರಾಕ್ಷ ಮಣಿಗಳನ್ನು ಸಾಧಕರಿಗೆ ಉಚಿತವಾಗಿ ನೀಡಿತು. ಈ ರುದ್ರಾಕ್ಷಗಳು ಮಹಾಶಿವರಾತ್ರಿಯಂದು ಸದ್ಗುರುಗಳಿಂದ ಚೈತನ್ಯೀಕರಿಸಲ್ಪಟ್ಟಿರುವುದರಿಂದ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತವೆ. ಈ ವರ್ಷ ಮಾರ್ಚ್ 1, 2022 ರಂದು ಬರುವ ಮಹಾಶಿವರಾತ್ರಿಯು ಯೋಗ ಸಂಪ್ರದಾಯದ ಮೂಲಪುರುಷನೆಂದು ಪರಿಗಣಿಸಲ್ಪಟ್ಟ ಆದಿ ಗುರು ಶಿವನ ಅನುಗ್ರಹವನ್ನು ಆಚರಿಸುತ್ತದೆ. ಅದನ್ನು ಉತ್ಕೃಷ್ಟವಾದ ವೈಭವದಿಂದ ಆಚರಿಸಲಾಗುತ್ತದೆ. ಈಶಾದಲ್ಲಿ ರಾತ್ರಿಯಿಡೀ ನಡೆಯುವ ಮಹಾಶಿವರಾತ್ರಿ ಆಚರಣೆಗಳು ಸದ್ಗುರುಗಳಿಂದ ಶಕ್ತಿಯುತ ಧ್ಯಾನಗಳನ್ನು ಒಳಗೊಂಡಿರುತ್ತವೆ ಮತ್ತು ಖ್ಯಾತ ಕಲಾವಿದರಿಂದ ಅದ್ಭುತವಾದ ಸಂಗೀತ ಪ್ರದರ್ಶನಗಳಿಂದ ತೀವ್ರವಾದ ಆಧ್ಯಾತ್ಮಿಕ ಅನುಭವವನ್ನು ಅನಾವರಣಗಳಿಸುತ್ತದೆ. ಗ್ರ್ಯಾಮಿ ಸಮಾರಂಭಗಳನ್ನು ಮೀರಿಸುವ, ಮಹಾಶಿವರಾತ್ರಿ 2021 ರ ಈಶಾ ಸಂಭ್ರಮಾಚರಣೆಗಳು ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ವೇದಿಕೆಗಳಲ್ಲಿ ಕಾರ್ಯಕ್ರಮದ ವರ್ಚುವಲ್ ನೇರ ಪ್ರಸಾರದಲ್ಲಿ 20.3 ದಶಲಕ್ಷ ವೀಕ್ಷಣೆಗಳನ್ನು ಗಳಿಸಿವೆ.

ಶಕ್ತಿಯುತವಾದ ಈ ರುದ್ರಾಕ್ಷವನ್ನು ಮನೆಗೇ ಉಚಿತವಾಗಿ ಪಡೆಯಲು ನೀವು 8300083000 ಮಿಸ್ಡ್ ಕಾಲ್​ ಕೊಡಬಹುದು. ಆಗ ನೋಂದಣಿಯ ಮಾಹಿತಿ ಜತೆ ಎಸ್​ಎಂಎಸ್​ ಬರುತ್ತದೆ. ಬಳಿಕ ನೋಂದಣಿ ನಮೂನೆಯಲ್ಲಿ ವಿವರ ಭರ್ತಿಗೊಳಿಸುತ್ತಿದ್ದಂತೆ ನೋಂದಣಿ ಪೂರ್ಣಗೊಳ್ಳುತ್ತದೆ. ನೋಂದಣಿಗೆ ಈ ಲಿಂಕ್ ( isha.co./rud ) ಕೂಡ ಬಳಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net