1 ರೇಟಿಂಗ್​ಗೆ 50 ರೂ. ಲಾಭದಾಸೆ ತೋರಿಸಿ 2.29 ಲಕ್ಷ ರೂ. ಮೋಸ

Cibra
Published on

ಹಾವೇರಿ: ಆಲ್​ನೈನ್​ನ 1 ರೇಟಿಂಗ್​ಗೆ 50 ರೂ. ಲಾಭಾಂಶ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 2.29 ಲಕ್ಷ ರೂ. ವಂಚಿಸಿದ ಕುರಿತು ಇಲ್ಲಿಯ ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಇಜಾರಿಲಕಮಾಪುರದ ನಿವಾಸಿ ಶಾರದಾ ಆರ್​. ಹನುಮಾಪುರ (35) ಎಂಬುವರಿಗೆ ಮೋಸ ಮಾಡಿರುವುದು.

ಇವರಿಗೆ ಅಜಯ ಚವ್ಹಾಣ ಎನ್ನುವ ಹೆಸರಿನ ವ್ಯಕ್ತಿ ಕರೆ ಮಾಡಿ ಲಿಂಕ್​ವೊಂದನ್ನು ಕಳುಹಿಸಿದ್ದಾನೆ. ಅದರ ಮೂಲಕ ಆಲ್​ಲೈನ್​ 1 ರೇಟಿಂಗ್​ಗೆ 50 ರೂ. ಲಾಭಾಂಶ ಕೊಡುವುದಾಗಿ ನಂಬಿಸಿದ್ದಾನೆ. ಇದನ್ನು ನಂಬಿದ ಶಾರದಾ 2.29 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ನಂತರ ಲಾಭಾಂಶ ಹಾಗೂ ಅಸಲು ಕೊಡದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net