

ಕೊಕ್ಕರ್ಣೆ: ಶಾಂತಿನಿಕೇತನ ಯುವವೃಂದ ಕುಡಿಬೈಲು ಕುಚ್ಚೂರು ವತಿಯಿಂದ ಪಿ.ಯು.ಸಿ. ಮತ್ತು ಪದವಿ ವಿದ್ಯಾರ್ಥಿಗಳಿಗೆ ಅ.22ರಂದು ಜ್ಞಾನಸ್ಫೂರ್ತಿ ರಾಜ್ಯಮಟ್ಟದ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಭಾಗವಹಿಸುವ ಆಸಕ್ತ ವಿದ್ಯಾರ್ಥಿಗಳು ಅ.18ರೊಳಗೆ https://chat.whatsapp.com ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬೇಕು. ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಆನ್‌ಲೈನ್ ಸರ್ಟಿಫಿಕೆಟ್ ನೀಡಲಾಗುವುದು. ಕೊನೆಯ ಸುತ್ತಿನಲ್ಲಿ ವಿಜೇತರಾದ ಇಬ್ಬರು ವಿದ್ಯಾರ್ಥಿಗಳಿಗೆ ಆನ್‌ಲೈನ್ ವಿನ್ನರ್ ಸರ್ಟಿಫಿಕೆಟ್ ಮತ್ತು ಆಕರ್ಷಕ ನಗದು ಬಹುಮಾನ ನೀಡಲಾಗುವುದು. ಮೊದಲ ಸುತ್ತಿನಲ್ಲಿ ಬಹು ಆಯ್ಕೆಯ ಪ್ರಶ್ನೆ ಮತ್ತು ಎರಡನೇ ಸುತ್ತಿನಲ್ಲಿ ಪ್ರಬಂಧ (100 ಪದಗಳಿಗೆ ಮೀರದಂತೆ)ನಡೆಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ರಾಜೇಶ್ ತಿಳಿಸಿದ್ದಾರೆ.