

ಪ್ರೀತಿಸಿ ಕೈಹಿಡಿದ ಪತಿರಾಯನ ನಿರ್ಲಕ್ಷ್ಯದಿಂದ ಖಿನ್ನತೆಗೊಳಗಾದ ಪತ್ನಿ ಆನ್ಲೈನ್ನಲ್ಲಿ ಪರಿಚಯವಾದವರ ಜತೆ ಸಲುಗೆ ಬೆಳೆಸಿ ಅವರಿಗೆ ತನ್ನ ಫೋಟೋ ಕಳುಹಿಸುವ ಗೀಳಿಗೆ ಬಿದ್ದಿದ್ದ ವಿಚಿತ್ರ ಪ್ರಕರಣ ವೊಂದು ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಕೊನೆಗೂ ಕೌಟುಂಬಿಕ ಸಲಹಾ ಕೇಂದ್ರದ ಮೂಲಕ ದಂಪತಿ ಸಮಸ್ಯೆ ಬಗೆಹರಿದಿದೆ.
ವೈಟ್ಫೀಲ್ಡ್ನ 34 ವರ್ಷದ ಉದ್ಯಮಿ ಕೆಲ ವರ್ಷಗಳ ಹಿಂದೆ ಮಹಿಳಾ ಉದ್ಯಮಿಯನ್ನು (33 ವರ್ಷ) ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ದಂಪತಿಗೆ 1 ವರ್ಷದ ಮಗುವಿದೆ. ಸದಾ ಉದ್ಯಮದ ಬಗ್ಗೆ ಚಿಂತಿಸುತ್ತಿದ್ದ ಪತಿ, ಪತ್ನಿ ಹಾಗೂ ಮಗುವಿಗೆ ಸಮಯ ಕೊಡುತ್ತಿರಲಿಲ್ಲ. ಪತ್ನಿ ಮಾತನಾಡಲು ಎಷ್ಟು ಯತ್ನಿಸಿದರೂ ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಬಲವಂತದಿಂದ ಮಾತನಾಡಿಸಿದರೆ ಉಡಾಫೆ ಉತ್ತರ ನೀಡುತ್ತಿದ್ದ. ಉದ್ಯಮದ ಚಿಂತೆಯಿಂದಾಗಿ ಪತ್ನಿ ಜತೆ ದೈಹಿಕ ಸಂಬಂಧದ ಆಸಕ್ತಿಯನ್ನೂ ತೋರುತ್ತಿರಲಿಲ್ಲ. ಇದರಿಂದ ಆಕೆ ಖಿನ್ನತೆಗೊಳಗಾಗಿದ್ದಳು.
ಉದ್ಯಮಿ ಜತೆ ಸಲುಗೆ: ಖಿನ್ನತೆಯಿಂದ ಹೊರಬರಲು ಪತ್ನಿ ಕೆಲ ದಿನಗಳ ಹಿಂದೆ ಆನ್ಲೈನ್ ಮೂಲಕ ಸ್ವಂತ ಉದ್ಯಮ ಆರಂಭಿಸಿದ್ದಳು.
ಮೊದ ಮೊದಲು ಪತ್ನಿಯ ಸಾಮಾಜಿಕ ಜಾಲತಾಣದ ಚಟವನ್ನು ಲಘುವಾಗಿ ಪರಿಗಣಿಸಿದ್ದ ಪತಿ ಬಳಿಕ ಆಕೆಯ ಚಲನ ವಲನಗಳನ್ನು ಪರಿಶೀಲಿಸಿದ್ದ. ಆಗ ಆಕೆ ತನ್ನ ಫೋಟೊವನ್ನು ಬೇರೆ ಬೇರೆ ವ್ಯಕ್ತಿಗಳಿಗೆ ಕಳಿಸುವ ಗೀಳಿಗೆ ಬಿದ್ದಿರುವ ವಿಚಾರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಪ್ರಶ್ನಿಸಿದರೆ ಆಕೆ ತನ್ನಿಂದ ದೂರವಾಗಬಹುದೆಂದು ಭಾವಿಸಿದ ಪತಿ ಪರಿಹಾರ್ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಬಂದು ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದ. ಇಲ್ಲಿನ ಸಿಬ್ಬಂದಿ ಪತ್ನಿಯನ್ನು ಕರೆಸಿದಾಗ ಆಕೆಗೆ ಅಚ್ಚರಿ ಉಂಟಾಗಿ ಕಣ್ಣೀರು ಹಾಕಿದ್ದಳು. ನಂತರ ಸಲಹಾ ಕೇಂದ್ರದ ಕೌನ್ಸೆಲರ್ ಸಂಧ್ಯಾರಾಣಿ ದಂಪತಿಗೆ ಕೌನ್ಸೆಲಿಂಗ್ ನಡೆಸಿ ಸಮಸ್ಯೆ ಪರಿಹರಿಸಿದ್ದಾರೆ.
| ಅವಿನಾಶ ಮೂಡಂಬಿಕಾನ ಬೆಂಗಳೂರು