ಆನ್‌ಲೈನ್ ಮಾರುಕಟ್ಟೆ ಗ್ರಾಹಕರು, ವರ್ತಕರಿಗೆ ಪರಿಣಾಮಕಾರಿ

13 smg 4
ಕಾರ್ಯಾಗಾರವನ್ನು ಡಾ. ಆರ್.ಸೆಲ್ವಮಣಿ ಉದ್ಘಾಟಿಸಿದರು. ಎನ್.ಗೋಪಿನಾಥ್, ಎ.ರಾಜಾಮಣಿ, ಲಕ್ಷಿ÷್ಮÃದೇವಿ ಗೋಪಿನಾಥ್, ಶಿಲ್ಪಾ ಗೋಪಿನಾಥ್, ಸುನೀತಾ ಚೇತನ್, ಉಮಾ ವೆಂಕಟೇಶ್, ಸುನೀತಾ ಮಾಧವ್, ಸಹನಾ ಚೇತನ್, ನಿರಂಜನಿ ರವೀಂದ್ರ, ವಸಂತ್ ಹೋಬಳಿದಾರ್, ಜಿ.ವಿಜಯ್‌ಕುಮಾರ್ ಇದ್ದರು.
Published on

ಶಿವಮೊಗ್ಗ: ಆನ್‌ಲೈನ್ ಮಾರುಕಟ್ಟೆ ಗ್ರಾಹಕರು ಹಾಗೂ ವರ್ತಕರಿಗೆ ಪರಿಣಾಮಕಾರಿಯಾಗಿ ಉಪಯೋಗಿಸಬಲ್ಲ ಆಧುನಿಕ ಸಾಧನವಾಗಿದ್ದು ಸ್ಥಳೀಯ ಉದ್ಯಮಿಗಳಿಗೆ ಆನ್‌ಲೈನ್ ಮಾರುಕಟ್ಟೆಯ ಕೌಶಲ ಅಗತ್ಯ ಎಂದು ಡಿಸಿ ಡಾ. ಆರ್.ಸೆಲ್ವಮಣಿ ಹೇಳಿದರು.

ನಗರದ ಮಥುರಾ ಪಾರಾಡೈಸ್‌ನಲ್ಲಿ ಸ್ವೇಧ ಸಂಸ್ಥೆಯಿAದ ಗುರುವಾರ ಮಹಿಳಾ ಉದ್ದಿಮೆದಾರರಿಗೆ ಆನ್‌ಲೈನ್ ಮಾರುಕಟ್ಟೆ ಅಭಿವೃದ್ಧಿ ಕುರಿತು ಆಯೋಜಿಸಿದ್ದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಜಿ¯್ಲೆಯಲ್ಲಿ ಒಂದು ಲಕ್ಷಕ್ಕೂ ಅಽಕ ಮಹಿಳಾ ಸ್ವಸಹಾಯ ಸಂಘಗಳಿದ್ದು ಸ್ಥಳೀಯ ಆಹಾರ ಉತ್ಪನ್ನ ಸೇರಿ ವಿವಿಧ ರೀತಿ ಉದ್ಯಮ ನಡೆಸುತ್ತಿz್ದÁರೆ. ಅವರಿಗೆ ಆನ್‌ಲೈನ್ ಮಾರುಕಟ್ಟೆಯ ವಿಸ್ತಾರ ಹಾಗೂ ಅವಕಾಶಗಳ ಬಗ್ಗೆ ತಿಳಿವಳಿಕೆ ಅವಶ್ಯ ಎಂದರು.
ಆಹಾರ ಉದ್ಯಮ, ಕರಕುಶಲ ವಸ್ತುಗಳ ತಯಾರಿಕೆ ಸೇರಿ ಸ್ಥಳೀಯವಾಗಿ ಸ್ವಂತ ಉದ್ಯಮ ನಡೆಸುತ್ತಿರುವ ಮಹಿಳೆ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಸರ್ಕಾರದ ವಿವಿಧ ಇಲಾಖೆಗಳಿಂದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆರ್ಥಿಕ ನೆರವು ಒದಗಿಸುವ ಕಾರ್ಯ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಪ್ರಯೋಜನ ಪಡೆದುಕೊಳ್ಳಬೇಕು. ಜಿ¯್ಲÁಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಸ್ವೇಧ ಸಂಸ್ಥೆಯ ಅಧ್ಯಕ್ಷೆ ಲಕ್ಷಿ÷್ಮÃದೇವಿ ಗೋಪಿನಾಥ್ ಮಾತನಾಡಿ, ಆಹಾರ, ಕೈಗಾರಿಕಾ, ಆರೋಗ್ಯ ಕ್ಷೇತ್ರ ಸೇರಿ ವಿವಿಧ ಕ್ಷೇತ್ರದಲ್ಲಿ ಉದ್ಯಮ ನಡೆಸುತ್ತಿರುವ ಮಹಿಳೆಯರು ಒಟ್ಟುಗೂಡಿ ಸ್ವೇಧ ಸಂಸ್ಥೆ ರೂಪಿಸಿದ್ದು ಹೊಸದಾಗಿ ಉದ್ಯಮ ನಡೆಸಲು ಆಸಕ್ತ ಇರುವ ಮಹಿಳೆಯರಿಗೆ ತರಬೇತಿ ನೀಡುವ ಕಾರ್ಯ ನಡೆಸುತ್ತಿದೆ ಎಂದು ಹೇಳಿದರು.
ಕೆನರಾ ಲೀಡ್ ಬ್ಯಾಂಕ್‌ನ ನೆಲ್ಸನ್ ಮಾತನಾಡಿ, ಮಹಿಳಾ ವಿಕಾಸ್ ಯೋಜನೆಯಡಿ ಕೈಗಾರಿಕೆ ಉದ್ಯಮ ನಡೆಸಲು 10 ಲಕ್ಷ ರೂ.ನಿಂದ 5 ಕೋಟಿ ರೂ. ವರೆಗೂ ಹಣಕಾಸಿನ ನೆರವು ನೀಡಲಾಗುತ್ತದೆ. ಉದ್ಯಮ ಸ್ಥಾಪನೆಗೆ ಅವಶ್ಯವಿರುವ ವಸ್ತುಗಳ ಖರೀದಿ ಹಾಗೂ ಅಗತ್ಯ ನಿರ್ವಹಣೆಗೆ ಉಪಯೋಗಿಸಬಹುದು ಎಂದು ಹೇಳಿದರು.
ಶಿವಮೊಗ್ಗ ಜಿ¯್ಲÁ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ನಗರದ ವಿವಿಧ ಬಡಾವಣೆಗಳಲ್ಲಿ ಮಹಿಳಾ ಉದ್ದಿಮೆದಾರರು ನಡೆಸುವ ಉದ್ಯಮಕ್ಕೆ ಪ್ರೋತ್ಸಾಹಿಸಲು, ಆಹಾರ ಉತ್ಪನ್ನ, ಕರಕುಶಲ ವಸ್ತುಗಳು ಸೇರಿ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲು ಉಚಿತವಾಗಿ ಮಳಿಗೆಗಳ ಅವಕಾಶವನ್ನು ಜಿ¯್ಲÁಡಳಿತ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಶಿವಮೊಗ್ಗ ನಗರ ಹಾಗೂ ಜಿ¯್ಲÉಯ ವಿವಿಧ ಗ್ರಾಮಗಳಿಂದ ಮಹಿಳಾ ಉದ್ಯಮಿಗಳಲ್ಲದೆ ಚಿತ್ರದುರ್ಗ, ಬೆಂಗಳೂರು, ಹಾಸನ, ದಾವಣಗೆರೆ, ಹಾವೇರಿ ಮುಂತಾದ ಜಿ¯್ಲÉಗಳಿಂದ ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು.
ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್, ಸುನೀತಾ ಚೇತನ್, ಉಮಾ ವೆಂಕಟೇಶ್, ಸುನೀತಾ ಮಾಧವ್, ಸಹನಾ ಚೇತನ್, ನಿರಂಜನಿ ರವೀಂದ್ರ, ಜಿ¯್ಲÁ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಡಿಐಸಿನ ಗಣೇಶ್, ಬಾಲಚಂದ್ರ, ಸಂತೋಷ್, ಅಭಿಷೇಕ, ವಾದಿರಾಜ್ ಇದ್ದರು.

ಯೂನಿಯನ್ ಬ್ಯಾಂಕ್‌ನಿAದ ಮಹಿಳಾ ಉದ್ದಿಮೆದಾರರ ಪ್ರೋತ್ಸಾಹಿಸಲು ನಾರಿ ಕಿ ಬಾರಿ ವಿಶೇಷ ಯೋಜನೆ ಇದೆ. ಮಹಿಳಾ ರೈತರನ್ನು ಪ್ರೋತ್ಸಾಹಿಸಲು ಕೃಷಿ ಕೆ ಸಾಥ್ ಮಹಿಳಾ ವಿಕಾಸ್ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು.|ಎ.ರಾಜಾಮಣಿಯೂನಿಯನ್ ಬ್ಯಾಂಕ್ ಡಿಜಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net