ಆನ್​ಲೈನ್​ ಟ್ರೇಡಿಂಗ್​ ಹೆಸರಿನಲ್ಲಿ ವ್ಯಕ್ತಿಗೆ 10 ಲಕ್ಷ ರೂ. ಪಂಗನಾಮ

Crime Logo
Published on

ಹಾವೇರಿ: ಆನ್​ಲೈನ್​ ಟ್ರೇಡಿಂಗ್​ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ 10 ಲಕ್ಷ ರೂ. ಹಣವನ್ನು ಹಾಕಿಸಿಕೊಂಡು ವಂಚಿಸಿರುವ ಕುರಿತು ಇಲ್ಲಿಯ ಸೈಬರ್​ ಕೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಯತ್ತಿನಹಳ್ಳಿಯ ಮಾಲತೇಶ ಕೆ. ಎಂಬುವರಿಗೆ ವಂಚಿಸಿರುವುದು.

ಇವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಆನ್​ಲೈನ್​ ಟ್ರೇಡಿಂಗ್​ನ ಲಿಂಕ್​ಅನ್ನು ಕಳುಹಿಸಿ ಅದರ ಮೂಲಕ ಟ್ರೇಡ್​ನಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ನಂಬಸಿ ವಿವಿಧ ಬ್ಯಾಂಕ್​ಗಳಿಂದ 10 ಲಕ್ಷ ರೂ.ಗಳನ್ನು ಹಾಕಿಸಿಕೊಂಡು ಮೋಸ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net