ಆನ್ ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡು ಸಾವಿಗೆ ಶರಣಾದ ಯುವಕ

Screenshot_20230701-230745
Published on

ಶಿರಸಿ: ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಳವೆಯಲ್ಲಿ ನಡೆದಿದೆ.

ಬಾಳೆತೋಟದ ವಿಜೇತ ಶಾಂತಾರಾಮ ಹೆಗಡೆ(37) ಮೃತ ವ್ಯಕ್ತಿ. ಆನ್ ಲೈನ್ ಗೇಮ್ ನಲ್ಲಿ 65 ಲಕ್ಷ ಕಳೆದುಕೊಂಡಿದ್ದ ಎನ್ನಲಾಗಿದೆ.

ಶುಕ್ರವಾರ ಬೆಂಗಳೂರಿಗೆ ತೆರಳುವುದಾಗಿ ಹೇಳಿ ಹೋದ ವ್ಯಕ್ತಿ ತೆರಳಿರಲಿಲ್ಲ. ಶನಿವಾರ ಬೆಳಗ್ಗೆ ಮನೆಯವರು ಗ್ರಾಮೀಣ ಠಾಣೆಗೆ ದೂರು ನೀಡಲು ಬಂದಿದ್ದರು.

ಮೊಬೈಲ್ ಲೊಕೇಶನ್ ನೋಡಿದಾಗ ಊರಿನ ಪಕ್ಕದ ಕುಳವೆ ಬೆಟ್ಟದಲ್ಲಿ ತೋರಿಸಿತ್ತು. ಅಲ್ಲಿ ಹೋಗಿ ನೋಡಿದಾಗ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net