ಆನ್‌ಲೈನ್ ಗೇಮ್ ಸಾಲ; ಯುವಕ ಆತ್ಮಹತ್ಯೆ

5 Dwd 1 (Nagaraj Ulavannavar)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಆನ್‌ಲೈನ್ ಗೇಮ್ ಚಟಕ್ಕೆ ಸಿಲುಕಿದ್ದ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗರಗ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ನಾಗರಾಜ ಶಿವಪ್ಪ ಉಳವಣ್ಣವರ (30) ನೇಣಿಗೆ ಶರಣಾದ ಯುವಕ. ಈತ ಧಾರವಾಡ ಐಐಟಿಯ ಉದ್ಯೋಗಿಯಾಗಿದ್ದನು. ಆನ್‌ಲೈನ್ ಗೇಮ್ ಚಟಕ್ಕೆ ಸಿಲುಕಿದ್ದ ಈತ, ಸುಮಾರು 20 ಲಕ್ಷ ರೂಪಾ¬ಗಳನ್ನು ಕಳೆದುಕೊಂಡಿದ್ದನು ಎನ್ನಲಾಗಿದೆ. ಈ ಕುರಿತು ಗರಗ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ರಾಮಪ್ಪ ಉನ್ನದ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net